ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾನೂನು ವಿವಿ ವಿದ್ಯಾರ್ಥಿಗಳ ಮುಗಿಯದ ಮುಷ್ಕರ: ನ್ಯಾಯ ಕೊಡಿ ನಮ್ಮ ಶೈಕ್ಷಣಿಕ ಭದ್ಧತೆ ನೀಡಿ...!

ಹುಬ್ಬಳ್ಳಿ: ಕಾನೂನು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ ಇಂದು ಕೂಡ ಮುಂದುವರಿದಿದೆ. ವಿಶ್ವ ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಬೇಕು ಹಾಗೂ ಕುಲಪತಿ ಈಶ್ವರ ಭಟ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

3 ವರ್ಷದ ವಿದ್ಯಾರ್ಥಿಗಳನ್ನು ಈಗಾಗಲೇ ಪ್ರಮೋಟ್ ಮಾಡಿರುವ ಕಾನೂನು ವಿಶ್ವವಿದ್ಯಾಲಯ ಸದ್ಯ ಅದೇ ರೀತಿಯಲ್ಲಿ 5 ವರ್ಷದ ವಿದ್ಯಾರ್ಥಿಗಳನ್ನು ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿದರು.

3 ವರ್ಷದ ವಿದ್ಯಾರ್ಥಿಗಳ ಪ್ರಮೋಟ್ ಆರ್ಡರ್ ಮೇಲಿರುವ ವಿಶ್ವ ವಿದ್ಯಾಲಯದ ಅಪೀಲ್ ವಾಪಸ್ ಪಡೆಯುವಂತೆ ಮನವಿ ಮಾಡಿದ ವಿದ್ಯಾರ್ಥಿಗಳು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿ ಪ್ರತಿಭಟನೆಗೆ ಮುಂದಾದರು. ಕಳೆದ ಸುಮಾರು ದಿನಗಳಿಂದ ನವನಗರದ ಕಾನೂನು ವಿಶ್ವ ವಿದ್ಯಾಲಯದ ಎದುರು ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ.

Edited By : Nagesh Gaonkar
Kshetra Samachara

Kshetra Samachara

05/01/2022 05:11 pm

Cinque Terre

28.53 K

Cinque Terre

1

ಸಂಬಂಧಿತ ಸುದ್ದಿ