ಕುಂದಗೋಳ: ಮೂಲ ಸೌಕರ್ಯ, ಸಮರ್ಪಕ ಆಹಾರ ಹಾಗೂ ಹಾಸ್ಟೆಲ್ ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿ ನಿನ್ನೆ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು. ಶಾಲಾ ಸಿಬ್ಬಂದಿ ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಪ್ರತಿಭಟನೆಯ ಮೂಲಕ ಆಕ್ರೋಶ ಹೊರಹಾಕಿದ್ರು.
ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಹಾಗೂ ಮೇಲಾಧಿಕಾರಿಗಳ ತಂಡ ಶಾಲೆಗೆ ಭೇಟಿ ಕೊಟ್ಟಿತು.
ವಿದ್ಯಾರ್ಥಿಗಳ ಕೆಲ ಪಾಲಕರ ನೇತೃತ್ವದಲ್ಲಿ ಶಾಲೆಗೆ ಭೇಟಿ ನೀಡಿ ಅಡುಗೆ ಸಾಮಗ್ರಿ ಪರಿಶೀಲಿಸಿದ್ರು. ಜೊತೆಗೆ ಅಡುಗೆ ಸಿಬ್ಬಂದಿಗಳನ್ನು ವಿಚಾರಣೆ ಮಾಡಿ ಮಕ್ಕಳಿಗೆ ಉತ್ತಮ ಆಹಾರ ಒದಗಿಸುವಂತೆ ತಿಳಿಸಿದ್ರು. ಈ ವೇಳೆ ವಿದ್ಯಾರ್ಥಿಗಳು ಸಮಸ್ಯೆ ಬಗ್ಗೆ ಅಧ್ಯಕ್ಷರು ಹಾಗೂ ಮೇಲಾಧಿಕಾರಿಗಳಿಗೆ ತಿಳಿಸಲು ಕೋರಿದ್ರು. ಜೊತೆಗೆ ಶೀಘ್ರ ಪದವಿಪೂರ್ವ ಹೊಸ ಹಾಸ್ಟೆಲ್ ಉದ್ಘಾಟನೆ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ರು..
Kshetra Samachara
09/12/2021 05:13 pm