ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಿ.ಇಡಿ. ಸರ್ಕಾರಿ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ

ಧಾರವಾಡ: ಪ್ರಸಕ್ತ ಶೈಕ್ಷಣಿಕ ವರ್ಷ(2021-22)ದಲ್ಲಿ ಎರಡು ವರ್ಷದ ಬಿ.ಇಡಿ. ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಮಹಾವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ http://www.schooleducation.kar.nic.in/ ಇಲ್ಲಿ ವಿವರವಾಗಿ ಪ್ರಕಟಿಸಲಾಗಿರುವ ಸರ್ಕಾರದ ಅಧಿಸೂಚನೆಯಲ್ಲಿ ಬಿ.ಇಡಿ. ಕೋರ್ಸಿನ ವ್ಯಾಸಂಗಕ್ಕಾಗಿ ಇರಬೇಕಾದ ಶಿಕ್ಷಣಾರ್ಹತೆ, ಮೀಸಲಾತಿ, ಶುಲ್ಕ ವಿವರ, ಜಿಲ್ಲಾವಾರು ಶಿಕ್ಷಣ ಮಹಾವಿದ್ಯಾಲಯಗಳ ವಿವರಗಳು ಮತ್ತು ಇತರೇ ಪೂರಕ ಸೂಚನೆಗಳು ಲಭ್ಯವಿದ್ದು, ಬಿ.ಇಡಿ. ಕೋರ್ಸ ವ್ಯಾಸಂಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಕಡ್ಡಾಯವಾಗಿ ಸಂಪೂರ್ಣ ಓದಿ ಅರ್ಥೈಸಿಕೊಂಡು ಕ್ರಮಬದ್ಧವಾಗಿ ಭರ್ತಿಮಾಡಿ ಆನ್‍ಲೈನ್ ಮೂಲಕ ಇದೇ ಅಕ್ಟೋಬರ್-13ರ ಒಳಗಾಗಿ ತಮ್ಮ ಅರ್ಜಿಗಳನ್ನು ದಾಖಲಿಸಬೇಕೆಂದು ಜಿಲ್ಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕಿ ಎನ್. ಕೆ. ಸಾವಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ನೋಡಲ್ ಅಧಿಕಾರಿ ವೈ.ಬಿ.ಬಾದವಾಡಗಿ(ಮೊ : 9901553470) ಅವರನ್ನು ಇಲ್ಲವೇ ಡಯಟ್ ಕಚೇರಿ ದೂರವಾಣಿ ಸಂಖ್ಯೆ: 0836-2791159 ಸಂಪರ್ಕಿಸುವಂತೆ ಅವರು ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

28/09/2021 08:42 pm

Cinque Terre

4.95 K

Cinque Terre

0

ಸಂಬಂಧಿತ ಸುದ್ದಿ