ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲ್ಯಾಪ್‌ಟಾಪ್‌ಗಾಗಿ ಪ್ರತಿಭಟನೆಯ ಹಾದಿ ಹಿಡಿದ ವಿದ್ಯಾರ್ಥಿಗಳು

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಸರ್ಕಾರದಿಂದ ಬರುವ ಲ್ಯಾಪ್‌ಟಾಪ್‌ಗಳನ್ನು ಪ್ರತಿಭಟನೆ ನಡೆಸಿಯೇ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು! ಪ್ರತಿ ಬಾರಿಯೂ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ಗಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಬುಧವಾರ ಕೂಡ ಸ್ನಾತಕೋತ್ತರ ವಿಭಾಗದ ಪ್ರಥಮ ಹಾಗೂ ಅಂತಿಮ ವರ್ಷದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ಗಾಗಿ ಕವಿವಿಯ ಕುಲಪತಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಶೋಧನಾ ಕಿರು ಪ್ರಬಂಧ ರಚನೆ, ವೆಬಿನಾರ್ ಹಾಗೂ ಆನ್‌ಲೈನ್ ತರಗತಿಗಳಿಗಾಗಿ ಲ್ಯಾಪ್‌ಟಾಪ್‌ ಅವಶ್ಯವಿರುವುದರಿಂದ ಕೂಡಲೇ ಲ್ಯಾಪ್‌ಟಾಪ್‌ ನೀಡಲೇಬೇಕು, ಆಹಾರ ಭತ್ಯೆಯನ್ನು 2 ಸಾವಿರದಿಂದ 3 ಸಾವಿರಕ್ಕೆ ಹೆಚ್ಚಿಸಬೇಕು, ಕಿರು ಪ್ರಬಂಧ ರಚನೆಗೆ ನೀಡಬೇಕಾಗಿರುವ ಭತ್ಯೆಯನ್ನು ಕೂಡಲೇ ನೀಡಬೇಕು ಹಾಗೂ ಕೊರೊನಾ ಲಾಕ್‌ಡೌನ್‌ ಕಾಲದಲ್ಲಿ ತಡೆಹಿಡಿದ ಆಹಾರ ಭತ್ಯೆಯನ್ನು ಬಿಡುಗಡೆಗೊಳಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಕುಲಪತಿ ಪ್ರೊ.ಗುಡಸಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ, ಅವರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವುದಾಗಿ ಭರವಸೆ ನೀಡಿದರು.

Edited By : Shivu K
Kshetra Samachara

Kshetra Samachara

08/09/2021 02:51 pm

Cinque Terre

24.78 K

Cinque Terre

0

ಸಂಬಂಧಿತ ಸುದ್ದಿ