ಕುಂದಗೋಳ : ಎಸ್ಡಿಎಂಸಿ ಸದಸ್ಯರು ರಚನೆ ಹೇಗಿರಬೇಕು, ಅವರ ಜವಾಬ್ದಾರಿ ಏನು, ಶಾಲಾ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಏನಿರಬೇಕು, ಎಂಬುದರ ಕುರಿತು ಕ್ಷೇತ್ರ ಸಿ.ಆರ್.ಪಿ ಜಿ.ಎಮ್.ನಂದಿಮಠ ಅವರು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ನಡೆಸಿ ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು .
ತಾಲೂಕಿನ ಕಡಪಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಸ್ಡಿಎಂಸಿ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಶಾಲಾ ಅಭಿವೃದ್ಧಿಗೆ ಪೂರಕವಾದ ಮತ್ತು ಮಕ್ಕಳ ಜ್ಞಾನಾರ್ಜನೆ ನಿಟ್ಟಿನಲ್ಲಿ ಸಹಾಯ ತೋರುವ ಎಸ್ಡಿಎಂಸಿ ಸದಸ್ಯರು ಮುಖ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಇ.ಎಮ್.ಅಂಗಡಿ ಅವರು ಮಾತನಾಡಿದರು, ಈ ವೇಳೆಯಲ್ಲಿ ಕಡಪಟ್ಟಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಎಸ್.ವಿ.ಬ್ಯಾಹಟ್ಟಿ, ಹಾಗೂ ಇತರ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
12/02/2021 09:47 pm