ನವಲಗುಂದ : ಕಳೆದು ಏಳು ತಿಂಗಳುಗಳಿಂದ ಮುಚ್ಚಿದ್ದ ಕಾಲೇಜುಗಳು ಮಂಗಳವಾರ ಆರಂಭವಾಗಿದ್ದು, ನವಲಗುಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆರಂಭವಾದರೂ ಸಹ ಕಾಲೇಜಿನತ್ತ ಮುಖ ಮಾಡಿಲ್ಲ...
ರಾಜ್ಯದಲ್ಲಿ ಕೆಲವು ದಿನಗಳಿಂದೀಚೆ ಕೊರೊನಾ ಪ್ರಕರಣಗಳು ಇಳಿಮುಖವಾಗಿದ್ದು, ಈ ನಡುವೆ ಕಾಲೇಜುಗಳೂ ಆರಂಭ ಗೊಳ್ಳುತ್ತಿವೆ. ಈ ಹಿನ್ನಲೆ ನವಲಗುಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ಸಹ ಕೊರೊನಾ ಮಾರ್ಗಸೂಚಿಯಂತೆ ಸಿದ್ಧತೆ ಮಾಡಿಕೊಂಡಿದ್ದು, ಕಾಲೇಜಿನ ಆವರಣ ಮತ್ತು ತರಗತಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಇನ್ನೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಸಂಜೊತಾ ಶಿರಸಂಗಿ ತಿಳಿಸಿದರು...
Kshetra Samachara
17/11/2020 02:48 pm