ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸ್ವಾವಲಂಭಿ ಬದುಕು ರೂಪಿಸುತ್ತದೆ ರೇಷ್ಮೆ ಕೃಷಿ

ಧಾರವಾಡ: ರೈತ ಈ ದೇಶದ ಬೆನ್ನೆಲುಬು ಎನ್ನುವ ಮಾತಿದೆ. ಹೀಗಿದ್ದರೂ ಇದೀಗ ಎಲ್ಲರೂ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಯಲ್ಲಿ ಅನೇಕ ರೀತಿಯ ವಿಧಾನಗಳಿದ್ದು, ಅನೇಕರು ಬೇರೆ ಬೇರೆ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡವರಿದ್ದಾರೆ. ಇದರಲ್ಲಿ ರೇಷ್ಮೆ ಕೃಷಿ ಕೂಡ ಒಂದಾಗಿದೆ. ವಿದ್ಯಾರ್ಥಿಗಳು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ವಿವಿಧ ಹಂತದ ಕೃಷಿಗಳು ಕೂಡ ದಾರಿದೀಪವಾಗಿವೆ.

ಹೌದು! ವಿದ್ಯಾರ್ಥಿ ದೆಸೆಯಲ್ಲಿಯೇ ಎಲ್ಲರಲ್ಲೂ ಸ್ವಾವಲಂಭನೆ ಎನ್ನುವುದು ಬೆಳೆಯಬೇಕು ಎಂಬ ಉದ್ದೇಶದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿನೆಟ್ ಹಾಲ್‌ನಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ರೇಷ್ಮೆ ಮಾರಾಟ ಮಂಡಳಿ ವತಿಯಿಂದ ರೇಷ್ಮೆ ಕೃಷಿ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಈ ರೇಷ್ಮೆ ಕೃಷಿ ವಸ್ತು ಪ್ರದರ್ಶನದಲ್ಲಿ ರೇಷ್ಮೆ ಹುಳು ಸಾಕಾಣಿಕೆ, ಚಂದ್ರಿಕೆ ಗೂಡು ಕಟ್ಟುತ್ತಿರುವ ಹುಳುಗಳು, ಸೋಂಕು ನಿವಾರಕಗಳು, ಬೆಳೆ ಪ್ರಚೋದಕ ಔಷಧಿ ಇವೆಲ್ಲವುಗಳನ್ನು ಪ್ರದರ್ಶನಕ್ಕಿಟ್ಟು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಅವುಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ರೇಷ್ಮೆ ಕೃಷಿ ಮಾಡುವುದು ಹೇಗೆ? ಅದನ್ನು ನಿರ್ವಹಣೆ ಮಾಡುವುದು ಹೇಗೆ? ಅದರಿಂದ ರೇಷ್ಮೆ ತೆಗೆಯುವುದು ಹೇಗೆ? ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ಕೃಷಿ ಜಮೀನು ಹೊಂದಿರುವ ವಿದ್ಯಾರ್ಥಿಗಳು ರೇಷ್ಮೆ ಮಾರಾಟ ಮಂಡಳಿ ಸಹಕಾರದೊಂದಿಗೆ ರೇಷ್ಮೆ ಕೃಷಿ ಮಾಡಿದರೆ, ಇನ್ನೊಬ್ಬರಿಗೆ ಉದ್ಯೋಗ ಕೊಡುವಷ್ಟು ದೊಡ್ಡವರಾಗಿ ಬೆಳೆಯಬಹುದು. ಯುವ ಜನತೆ ಈ ರೇಷ್ಮೆ ಕೃಷಿಯತ್ತ ಮುಖ ಮಾಡಬೇಕಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಹೇಳಿದರು.

ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿ ಹೆಚ್ಚಿನ ಸಂಚಲನ ಸೃಷ್ಟಿ ಮಾಡುತ್ತಿದ್ದು, ಆ ಬಗ್ಗೆ ಯುವ ವಿದ್ಯಾರ್ಥಿಗಳಲ್ಲೂ ಅರಿವು ಮೂಡಿಸುವ ರೇಷ್ಮೆ ಮಾರಾಟ ಮಂಡಳಿಯ ಕೆಲಸ ನಿಜಕ್ಕೂ ಹೆಮ್ಮೆಯ ವಿಚಾರ. ಯುವ ಜನತೆ ಉದ್ಯೋಗ ಅರಸಿ ಹೋಗದೇ ತಾವೇ ಉದ್ಯೋಗದಾತರಾಗಬೇಕು ಎಂಬುದು ಮಂಡಳಿಯ ಉದ್ದೇಶವಾಗಿದೆ.

Edited By : Nagesh Gaonkar
Kshetra Samachara

Kshetra Samachara

04/01/2022 06:27 pm

Cinque Terre

36.12 K

Cinque Terre

0

ಸಂಬಂಧಿತ ಸುದ್ದಿ