ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಖಾದಿ ಬಳಕೆ ಗಾಂಧಿ ಜಯಂತಿಗೆ ಮಾತ್ರ ಸೀಮಿತವಾಗಬಾರದು: ನ್ಯಾಯವಾದಿ ಹೊಸಕೇರಿ

ಧಾರವಾಡ: ಖಾದಿ ಬಟ್ಟೆಯನ್ನು ಕೇವಲ ಗಾಂಧಿ ಜಯಂತಿಗೆ ಮಾತ್ರ ಸೀಮಿತಗೊಳಿಸದೇ ಅದನ್ನು ನಿರಂತರವಾಗಿ ಬಳಕೆ ಮಾಡುವುದು ಅಗತ್ಯ ಎಂದು ನ್ಯಾಯವಾದಿ ಬಸವಪ್ರಭು ಹೊಸಕೇರಿ ಹೇಳಿದರು.

ಸಿದ್ಧವೀರ ಸತ್ಸಂಗ ಮತ್ತು ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಾಡುತ್ತಿದ್ದರು.

ಖಾದಿ ಭಾರತ ದೇಶದ ಸಂಕೇತವಾಗಿ ಬಳಕೆಯಾಗಬೇಕು. ಕೃಷಿ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ಖಾದಿ ಹಿಂದಿರುವ ಶ್ರಮ ಮತ್ತು ಅವಲಂಭಿತ ಕುಟುಂಬಗಳನ್ನು ಹಾಗೂ ಕಾರ್ಮಿಕ ವರ್ಗವನ್ನು ಗಮನದಲ್ಲಿಟ್ಟುಕೊಂಡು ಖಾದಿ ಬಳಕೆಗೆ ಮುಂದಾಗಬೇಕು ಎಂದರು. ಸಿದ್ಧವೀರ ಸತ್ಸಂಗದ ಅಧ್ಯಕ್ಷರೂ ಆಗಿರುವ ಖ್ಯಾತ ವೈದ್ಯ ಡಾ. ನಿತಿನ್‍ಚಂದ್ರ ಹತ್ತೀಕಾಳ ಮಾತನಾಡಿ, ಇಡೀ ಜಗತ್ತು ಕೊಂಡಾಡಿದ ಮಹಾತ್ಮಾ ಗಾಂಧೀಜಿಯವರ ತತ್ವಗಳು ಎಂದಿಗಿಂತ ಇಂದು ಹೆಚ್ಚು

ಪ್ರಸ್ತುತ ಎನಿಸುತ್ತವೆ ಎಂದರು.

ಪಾಲಿಕೆ ಸದಸ್ಯ ಡಾ.ಮಯೂರ್ ಮೋರೆ, ಮಹೇಶ ಗಸ್ತೆ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾ.ಹತ್ತೀಕಾಳ ಅವರು ಬರೆದ ಗಾಂಧೀ ಸ್ಮೃತಿ ಪುಸ್ತಕಗಳನ್ನು ವಿತರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ತೋಡಕರ, ಡಾ.ಕೇಯೂರ್ ಕರಗುದರಿ, ವಿಲ್ಸನ್ ಮೈಲಿ ಸೇರಿದಂತೆ ಇತರರು ಇದ್ದರು.

Edited By : Shivu K
Kshetra Samachara

Kshetra Samachara

03/10/2022 10:52 am

Cinque Terre

14.42 K

Cinque Terre

0

ಸಂಬಂಧಿತ ಸುದ್ದಿ