ಧಾರವಾಡ: ಭಗವಾನ ವಿಶ್ವಕರ್ಮನು ಕೃಷಿ ಯಂತ್ರೋಪಕರಣ ಸಾಧನಗಳ ಆಧಾರ ಸ್ತಂಭ. ಮೂರ್ತಿ ಕಾಯಕಕ್ಕೆ ಸ್ವರೂಪ ನೀಡಿದ ಮೊದಲ ಜೀವಿ ವಿಶ್ವಕರ್ಮನಾಗಿದ್ದಾನೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ಧಾರವಾಡದ ಆಲೂರು ವೆಂಕಟರಾವ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಭಗವಾನ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಕನು ಒಂದು ಸಣ್ಣ ಕಾರ್ಯ ಮಾಡಬೇಕೆಂದರೆ ಅದಕ್ಕೆ ವಿಶ್ವಕರ್ಮನೆ ಸಾಕ್ಷಿ. ಬಡಿಗೇರ ಸಮಾಜದವರು ತಮ್ಮ ಮೂಲ ವೃತ್ತಿಯಾದ ಆಭರಣಗಳನ್ನು ಹಾಗೂ ಮೂರ್ತಿಗಳ ರಚನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕವಿವಿಯ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಪಿ.ಈರಣ್ಣ ಅವರು ವಿಶೇಷ ಉಪನ್ಯಾಸ ನೀಡಿದರು. ಮಾಜಿ ಶಾಸಕಿ ಸೀಮಾ ಮಸೂತಿ ಕೂಡ ಮಾತನಾಡಿದರು.
ಸಮಾಜದ ಮುಖಂಡ ಮಹಾರುದ್ರ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ವಿಶೇಷ ಮುಷ್ಠಿ ಬೀಗಗಳ ತಯಾರಕ ವೀರಭದ್ರ ಕಮ್ಮಾರ ಸೇರಿದಂತೆ ವಿಶ್ವಕರ್ಮ ಸಮಾಜದ ವಿವಿದ ಸಾಧಕರನ್ನು ಸನ್ಮಾನಿಸಲಾಯಿತು.
Kshetra Samachara
18/09/2022 02:55 pm