ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೃಷಿ ಮೇಳಕ್ಕೆ ಮೆರಗು ಕೊಟ್ಟ ಫಲ, ಪುಷ್ಪ ಪ್ರದರ್ಶನ; ಗಮನಸೆಳೆದ ಅಪ್ಪು ಚಿತ್ರ

ಧಾರವಾಡ: ನಾಳೆಯಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಅದರ ಮುನ್ನಾ ದಿನವಾದ ಶನಿವಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಫಲ, ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಕೃಷಿ ಮೇಳಕ್ಕೆ ಈ ಪ್ರದರ್ಶನ ಮೆರಗು ತಂದು ಕೊಟ್ಟಿದೆ.

ಕೃಷಿ ವಿಶ್ವವಿದ್ಯಾಲದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಫಲ, ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಪ್ರಮುಖವಾಗಿ ಗಮನಸೆಳೆಯುತ್ತಿರುವುದು ಕಲ್ಲಂಗಡಿ ಹಣ್ಣಿನಲ್ಲಿ ಮೂಡಿ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರ.

ವಿವಿಧ ಜಾತಿಯ ಪುಷ್ಪಗಳ ಪ್ರದರ್ಶನ, ವಿವಿಧ ಜಾತಿಯ ಸಸಿಗಳು, ವಿವಿಧ ತರಹದ ಹಣ್ಣುಗಳು ನೋಡುಗರ ಗಮನಸೆಳೆಯುತ್ತಿವೆ. ಮೊದಲ ದಿನವೇ ಫಲ, ಪುಷ್ಪ ಪ್ರದರ್ಶನ ನೋಡಲು ವಿದ್ಯಾರ್ಥಿಗಳು ಹಾಗೂ ರೈತರ ಆಗಮಿಸಿದ್ದು ವಿಶೇಷವಾಗಿತ್ತು.

ಇನ್ನು ಕಲ್ಲಂಗಡಿ ಹಣ್ಣಿನಲ್ಲಿ ಭಗತ್ ಸಿಂಗ್, ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧಿ, ದ.ರಾ.ಬೇಂದ್ರೆ, ಸುಭಾಷಚಂದ್ರ ಬೋಸ್ ಸೇರಿದಂತೆ ವಿವಿಧ ಮಹಾನ್ ವ್ಯಕ್ತಿಗಳ ಚಿತ್ರವನ್ನು ಬಿಡಿಸಲಾಗಿದ್ದು, ಇದರ ಮಧ್ಯೆ ಅಪ್ಪು ಚಿತ್ರವನ್ನೂ ಬಿಡಿಸಿ ಇಡಲಾಗಿದೆ. ಇದೇ ನೋಡುಗರ ಪ್ರಮುಖ ಆಕರ್ಷಣೆಯಾಗಿದೆ. ಇನ್ನು ಈ ಪ್ರದರ್ಶನವನ್ನು ನೋಡಿದವರು ಖುಷಿಪಟ್ಟರು.

ಒಟ್ಟಾರೆಯಾಗಿ ಕೃಷಿ ಮೇಳದ ಮೊದಲ ದಿನವಾದ ಇಂದು ಫಲ, ಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ಜನ ತಂಡೋಪತಂಡವಾಗಿ ಫಲ, ಪುಷ್ಪ ಪ್ರದರ್ಶನ ನೋಡಲು ಆಗಮಿಸುತ್ತಿದ್ದಾರೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2022 09:08 pm

Cinque Terre

44.34 K

Cinque Terre

0

ಸಂಬಂಧಿತ ಸುದ್ದಿ