ಧಾರವಾಡ: ಹಿಂದೂ, ಮುಸ್ಲಿಂ ಭಾಯಿ ಭಾಯಿ ಎಂಬುದಕ್ಕೆ ಧಾರವಾಡ ಮತ್ತೊಮ್ಮೆ ಸಾಕ್ಷಿಯಾಗಿದೆ. ಧಾರವಾಡದಲ್ಲಿ ಮುಸ್ಲಿಂ ಯುವಕರು ಗಣೇಶ ವಿಸರ್ಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ಧತೆಗೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ.
ಹೌದು! ನಾಳೆ ಹುಣ್ಣಿಮೆ ಇರುವುದರಿಂದ 11ನೇ ದಿನದ ಗಣೇಶನನ್ನು ಶುಕ್ರವಾರವೇ ವಿಸರ್ಜನೆ ಮಾಡಲು ಕೊಂಡೊಯ್ಯಲಾಗುತ್ತಿತ್ತು. ಮೆರವಣಿಗೆ ಮೂಲಕ ತರಲಾಗುತ್ತಿದ್ದ ಗಣೇಶನ ಮೂರ್ತಿ ಧಾರವಾಡದ ಮದನಿ ಮಸೀದಿ ಎದುರಿಗೆ ಬರುತ್ತಿದ್ದಂತೆ ಮುಸ್ಲಿಂ ಯುವಕರು ಗಣೇಶನ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಮುಜಮಿಲ್ ಪಠಾಣ್ ನೇತೃತ್ವದಲ್ಲಿ ಮುಸ್ಲಿಂ ಯುವಕರ ತಂಡ ಗಣೇಶನಿಗೆ ಮಾಲಾರ್ಪಣೆ ಮಾಡುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ.
ಅಷ್ಟೇ ಅಲ್ಲದೇ ಘೋಷಣೆಗಳನ್ನು ಕೂಗಿ ಸಂಭ್ರಮದಿಂದಲೇ ಗಣೇಶನಿಗೆ ವಿದಾಯ ಹೇಳಿದ್ದಾರೆ. ಒಟ್ಟಾರೆ ಧಾರವಾಡ ಸೌಹಾರ್ಧತೆಗೆ ಮತ್ತೊಂದು ಬಾರಿ ಸಾಕ್ಷಿಯಾದಂತಾಗಿದೆ.
Kshetra Samachara
09/09/2022 09:19 pm