ಹುಬ್ಬಳ್ಳಿ: ಛೋಟಾ ಬಾಂಬೆ ಎಂದು ಕರೆಸಿಕೊಳ್ಳಲು ಹುಬ್ಬಳ್ಳಿಯಲ್ಲಿ ಈಗಾಗಲೇ ಕೆಲವು ಕಿಡಿಗೇಡಿಗಳಿಂದ ಕೋಮು ಭಾವನೆ ಕೇರಳುತ್ತಿದ್ದು, ಪರಿಣಾಮ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ. ಆದರೆ ಇದೇ ಹುಬ್ಬಳ್ಳಿಯ ರಾಮನಗರದಲ್ಲಿ ಹಿಂದು ಮುಸ್ಲಿಂ, ಕ್ರೈಸ್ತರು ಸೇರಿದಂತೆ ಸರ್ವಜನಾಂಗದ ಜನರು ಸೌಹಾರ್ದತೆಯಿಂದ ಗಣೇಶ ಚತುರ್ಥಿ ಆಚರಣೆ ಮಾಡುತ್ತಿದ್ದಾರೆ.
ಹೌದು, ರಾಮನಗರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಆದರೆ ಬಡಾವಣೆಯ ಜನರು ಅವರವರ ಸ್ಥಳೀಯ ಮಟ್ಟದಲ್ಲಿ ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಇದರಿಂದ ರಾಮನಗರ ಭಾಗದಲ್ಲಿ 11ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ನಡೆಯುತ್ತಿತ್ತು. ಆದರೆ ಈ ಬಾರಿ ಎಲ್ಲರೂ ಒಗ್ಗೂಡಿ ಸರ್ವ ಧರ್ಮ ಸೇವಾ ಸಮಿತಿ ಶ್ರೀ ಗಜಾನನ ಉತ್ಸವ ರಾಮನಗರದಿಂದ ಒಂದೇ ಗಣೇಶನನ್ನು ಇರಿಸಿ ಒಗ್ಗಟ್ಟು ಪ್ರದರ್ಶಿಸಿ ಸೌಹಾರ್ದತೆ ಮೆರೆದಿದ್ದಾರೆ.
ಇನ್ನು ಹನ್ನೊಂದು ದಿನದ ಗಣೇಶೋತ್ಸವದಲ್ಲಿ ಪ್ರತಿ ದಿನ ವಿಶೇಷ ಪೂಜೆ ಜೊತೆಗೆ ಭಕ್ತರಿಗೆ ಪ್ರಸಾದ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸಂಜೆ ವೇಳೆ ದಾಂಡಿಯಾ, ಹಾಡು, ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಜನರಿಗೆ ಭಕ್ತಿಯ ಜೊತೆಗೆ ಮನರಂಜನೆಯ ಮೆರಗನ್ನು ನೀಡಿದ್ದಾರೆ.
ಒಟ್ಟಿನಲ್ಲಿ ಧರ್ಮ ಧರ್ಮಗಳ ಕಚ್ಚಾಟದ ನಡುವೆ ಅದೆಷ್ಟೋ ಕೊಲೆಗಳು ನಡೆಯುತ್ತಿವೆ. ಇಂತಹ ದಿನಗಳಲ್ಲಿ ರಾಮನಗರದ ಜನತೆ ಗಣೇಶೋತ್ಸವ ಆಚರಣೆ ಮಾಡಿ ನಾವೆಲ್ಲರೂ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2022 06:42 pm