ಧಾರವಾಡ : ಧಾರವಾಡ ನಗರದ ವಾರ್ಡ್ ನಂಬರ್ 19 ರ ಜಾಂಬವಂತ ನಗರದಲ್ಲಿ ಪಾಲಿಕೆ ಮೇಯರ್ ಹಾಗೂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೆ ವೇಳೆ ನಗರದ ಹಲವು ಬೇಡಿಕೆಗಳಿಗಾಗಿ ಪಾಲಿಕೆ ಮೇಯರ್ ವೀರೇಶ ಅಂಚಟಗೇರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ವೀರೇಶ ಅಂಚಟಗೇರಿ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುರೇಶ ಬೇಂದ್ರೆ, ಶಿವು ಹಿರೇಮಠ್, ಜ್ಯೋತಿ ಪಾಟೀಲ ಅವರಿಗೆ ಜಾಂಬವಂತ ನಗರದವರಿಂದ ಸನ್ಮಾನವನ್ನು ನೆರವೇರಿಸಲಾಯಿತು.
ಈ ವೇಳೆ ಮನವಿ ಸಲ್ಲಿಸಿದ ನಗರದ ಗಣ್ಯರು ಪ್ರಮುಖ ಬೇಡಿಕೆಯಾದ ಸಮುದಾಯ ಭವನದ ನಿರ್ಮಾಣದೊಂದಿಗೆ ಕಾಂಕ್ರಿಟ್ ರಸ್ತೆಗಳ ನಿರ್ಮಾಣ, ಗಟಾರು ನಿರ್ಮಾಣ, ಗಂಗಾ ಮಾತೆಯ ಗುಡಿಯ ಮುಂಬಾಗ ಕಾಮಾನ್ ಜೊತೆಗೆ ಅಲಂಕಾರಿಕ ಕಬ್ಬಿಣದ ತಗಡು ನಿರ್ಮಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಾಂಬವಂತ ನಗರದ ಅಧ್ಯಕ್ಷರು ನಾರಾಯಣ ನಾರಕ್ಕನವರ, ರಾಮಚಂದ್ರ ಕೊದಡ್ಡಿ, ಪುಲ್ಲಯ್ಯ ಚಂಚಕೋಲ, ಹೊಬ್ಳೆಶ್ ಅರ್ವೇಡ್, ರಾಜು ಮಾದರ ಹಾಗೂ ಬಾಬು ಜಗಜೀವನ ರಾಮ್ ಯುವಕ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ನಗರದ ಗಣ್ಯರು, ಸಾರ್ವಜನಿಕರು ಇದ್ದರು.
Kshetra Samachara
07/09/2022 08:36 pm