ನವಲಗುಂದ : ನವಲಗುಂದ ತಾಲೂಕಿನ ಮೊರಬ ವಲಯ ಮೊರಬ ಕಾರ್ಯಕ್ಷೇತ್ರದ ಸ್ಪೂರ್ತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಮಹಿಳಾ ಜ್ಞಾನವಿಕಾಸದ ಧೆಯೋದ್ದೇಶಗಳು ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಗದಗ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಯೋಗೀಶ್ ಬಿ ಮಾಹಿತಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರಿ ವಿಶ್ವವಿದ್ಯಾಲಯದ ಗಿರಿಜಾ ಅಕ್ಕನವರ ಹಾಗೂ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರ ನಾಗರಾಜ ಮನಗುಳಿ, ಮಹಾದೇವಿ ಇನಾಮತಿ, ಪಂಚಾಯತ್ ಸದಸ್ಯರು ಹಾಗೂ ತಾಲೂಕಿನ ಯೋಜನಾಧಿಕಾರಿ ಒಮ್ಮು ಮರಾಠೆ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪುಷ್ಪಲತಾ ಶೆಟ್ಟಿ, ವಲಯದ ಮೇಲ್ವಿಚಾರಕರಾದ ಅಶ್ವಿನಿ, ಸೇವಾ ಪ್ರತಿನಿಧಿಯಾದ ಪ್ರಭಾವತಿ, ಪುಷ್ಪ ಕೇಂದ್ರದ ಸದಸ್ಯೆ ಕಶಮ್ಮ, ಪ್ರೇಮಾ ಹಿರೇಮಠ, ತರಬೇತಿ ಸಹಾಯಕರಾದ ಉಮಾ ಪಾಟೀಲ ಇತರರು ಉಪಸ್ಥಿತರಿದ್ದರು.
Kshetra Samachara
24/08/2022 02:40 pm