ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಧಾರವಾಡ ನಿರಂತರ ನೀರು ಪೂರೈಕೆ ಯೋಜನೆ ರಾಷ್ಟ್ರಕ್ಕೆ ಮಾದರಿ: ಮೇಯರ್ ಅಂಚಟಗೇರಿ

ಧಾರವಾಡ: ವಿಶ್ವ ಬ್ಯಾಂಕ್ ನೆರವಿನಲ್ಲಿ ಅನುಷ್ಠಾನಕ್ಕೆ ಬರುತ್ತಿರುವ ಅವಳಿ ನಗರದ ನಿರಂತರ ನೀರು ಯೋಜನೆ ಪ್ರಾಯೋಗಿಕವಾಗಿ 24×7 ನೀರು ಸರಬರಾಜು ಯಶಸ್ವಿಯಾಗಿದ್ದು, ದೇಶಕ್ಕೆ ಮಾದರಿ ಆಗಿದೆ. ಯೋಜನೆ ಪೂರ್ಣಗೊಳ್ಳಲು ಮಾಧ್ಯಮ, ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಕೆಯುಐಡಿಎಫ್‌ಸಿ ಮತ್ತು ನಗರ ನೀರು ಸರಬರಾಜು ಆಧುನೀಕರಣ ಕುಸ್ಸೆಂಪ್ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಮಾಹಿತಿ ವಿನಿಮಯ ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿರಂತರ ನೀರು ಯೋಜನೆ ಯೋಜನೆಯಡಿ ಅವಳಿ ನಗರದ ಕುಡಿಯುವ ನೀರು ಸರಬರಾಜು ಜಾಲವನ್ನು ಸುಧಾರಿಸಲಾಗುವುದು. ಅವಳಿನಗರದಲ್ಲಿ ಸುಮಾರು 1,345 ಕೀಲೋ ಮೀಟರ್ ಪೈಪಲೈನ್ ಪುನರ್ ಸ್ಥಾಪಿಸಲಾಗುವುದು. ಅವಳಿನಗರ ವ್ಯಾಪ್ತಿಯ ಸುಮಾರು 12 ಲಕ್ಷ ಜನರಿಗೆ ಯೋಜನೆಯ ಲಾಭ ಸಿಗಲಿದೆ. 1,45,000 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ. ನಿರಂತರ ನೀರು ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಸುಮಾರು 23 ಜಲಸಂಗ್ರಹಾರಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಈ ಮೊದಲು ಇದ್ದ 67 ವಾರ್ಡ್ ಗಳಿಗೆ 24X7 ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು. ಈಗ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೇಂದ್ರ ಸರ್ಕಾರ, ವಿಶ್ವಬ್ಯಾಂಕ್ ಹಾಗೂ ರಾಜ್ಯ ಸರ್ಕಾರದ ಹಣಕಾಸಿನ ನೆರವಿನೊಂದಿಗೆ ಈ ಹೆಚ್ಚಾಗಿರುವ 82 ವಾರ್ಡ್ ಗಳಿಗೂ ನಿರಂತರ ನೀರು ಸರಬರಾಜು ಯೋಜನೆ ವಿಸ್ತರಣೆಗೊಳಿಸಲಾಗುತ್ತಿದೆ ಎಂದು ಮೇಯರ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

11/08/2022 10:47 pm

Cinque Terre

41.95 K

Cinque Terre

4

ಸಂಬಂಧಿತ ಸುದ್ದಿ