ಕುಂದಗೋಳ: ಅಬ್ಬಾ ! ನೋಡುಗರಲ್ಲಿ ರೋಮಾಂಚನ ಎನಿಸುವ ಆಲೆ ದೇವರುಗಳ ಮುಖಾಮುಖಿ, ದೇವರನ್ನು ಶಾಂತಗೊಳಿಸುವ ಘೋಷಣೆಗಳು. ಇದು ಕುಂದಗೋಳ ತಾಲೂಕಿನ ಹಳ್ಳಿ, ಹಳ್ಳಿಗಳಲ್ಲಿ ಕಂಡು ಬಂದ ಆಲೆ ಹಬ್ಬದ ಸಂಭ್ರಮ ಸಡಗರ.
ಹೌದು ! ಎಡೆಬಿಡದೆ ಸುರಿಯುವ ಮಳೆಯನ್ನು ಲೆಕ್ಕಿಸದೇ ಈ ರೈತಾಪಿ ಜನತೆ, ದೈವಿ ಶಕ್ತಿ ಆರಾಧನೆ ಮೊಹರಂ ಹಬ್ಬವನ್ನ ಅತಿ ವಿಜೃಂಭಣೆಯಿಂದ ಆಚರಣೆ ಮಾಡಿದರು. ಈಗಾಗಲೇ ಕುಂದಗೋಳ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಆಲೆ ದೇವರು ಅಗ್ನಿ ಹಾಯ್ದು ಗ್ರಾಮ,ಗ್ರಾಮಗಳಲ್ಲಿ ಆಲೆ ದೇವರು ಹಾಗೂ ಪಾಂಜಾ ಡೋಲಿಗಳ ಮುಖಾಮುಖಿ ನಡೆದಿದೆ.
ಈಗಾಗಲೇ ಕುಂದಗೋಳ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ "ಕತ್ತಲ್ ರಾತ್" ಮಾಡಿ ಮುಗಿಸಿ ಇಂದು ದೇವರು ಹೊಳೆಗೆ ಹೋದರೆ, ವೈವಿಧ್ಯಮಯ ಆಚರಣೆಯ ಯರಗುಪ್ಪಿ ಗ್ರಾಮದಲ್ಲಿ ಇಂದು ಮೊಹರಂ ಹಬ್ಬ ಆಚರಣೆ ನಡೆದಿದ್ದು ಚಕ್ಕಡಿಯಲ್ಲಿ ಕಾಕಡಾರತಿ ಮೆರವಣಿಗೆ ನಡೆದು, ಇತ್ತ ಶಸ್ತ್ರ ಪವಾಡ, ಯುವಕರ ಕೇಕೆ, ಶಿಳ್ಳೆ, ಚಪ್ಪಾಳೆಗಳ ನಡುವೆ ತಾಲೂಕಿನಲ್ಲಿ ಮೊಹರಂ ಹಬ್ಬ ಮುಗಿದ್ರೇ ಯರಗುಪ್ಪಿಯಲ್ಲಿ ಇಂದು ಆರಂಭ ಆಗಿದೆ.
Kshetra Samachara
09/08/2022 04:38 pm