ನವಲಗುಂದ : ನವಲಗುಂದ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 7 ರಲ್ಲಿ ಕರ್ನಾಟಕ ಫಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಎನ್.ಎಚ್ ಪುರಾಣಿಕ ಅವರಿಗೆ ವಿಶ್ವದರ್ಶನ ಪತ್ರಿಕೆ ಕೊಡಮಾಡಿದ ರಾಷ್ಟ್ರೀಯ ಮಾದ್ಯಮ ರತ್ನ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ನಿವೃತ್ತ ಹಾಗೂ ಹಿರಿಯ ಪತ್ರಕರ್ತರಾದ ಎನ್.ಎಚ್ ಪುರಾಣಿಕ ಅವರು, ಪತ್ರಕರ್ತರಾದವರಿಗೆ ಸೃಜನ ಶೀಲತೆಯ ಜೊತೆಗೆ ಸಾಮಾಜಿಕ ಬದ್ದತೆ ಅವಶ್ಯವಾಗಿದೆ. ಹಾಗೂ ಪತ್ರಿಕಾ ದಿನಾಚರಣೆ ಆಚರಿಸುತ್ತಿರುವುದು ತುಂಬಾ ಸಂತೋಷ ತಂದಿದೆ. ಕಾರ್ಯಕ್ರಮ ಆಯೋಜಿಸಿದ್ದ ಮಹಾಮಂಡಳದ ಅದ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.
Kshetra Samachara
29/07/2022 05:35 pm