ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ದಿ.21 ರಂದು ಅಭಿನಯ ತರಬೇತಿ ಶಿಬಿರದ ಸಮಾರೋಪ

ಹುಬ್ಬಳ್ಳಿ: ಗುರುವಾರ ಸಂಜೆ 4 ಗಂಟೆಗೆ ನಗರದ ಗೋಪನಕೊಪ್ಪದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಸುನಿಧಿ ಕಲಾ ಸೌರಭ ಸಂಸ್ಥೆಯಿಂದ ಆಯೋಜಿಸಿದ್ದ ಅಭಿನಯ ತರಬೇತಿ ಶಿಬಿರದ ಸಮಾರೋಪ ಜರುಗಲಿದೆ.

ಮಕ್ಕಳಿಗಾಗಿ ಆಯೋಜಿಸಿದ ಅಭಿನಯ ತರಬೇತಿ ಶಿಬಿರದಲ್ಲಿ ಗೋಪನಕೊಪ್ಪ ಸರ್ಕಾರಿ ಶಾಲೆ ರೋಟರಿ ಶಾಲೆಯ ಹಾಗೂ ಸ್ಥಳೀಯ ಬಡಾವಣೆಯ 45 ಕ್ಕೂ ಹೆಚ್ಚು ಮಕ್ಕಳು ಈ ತರಬೇತಿ ಶಿಬಿರದಲ್ಲಿ ಒಂದು ತಿಂಗಳಿನಿಂದ ಪಾಲ್ಗೊಂಡು ಅಭಿನಯ, ನೃತ್ಯ, ಸಂಗೀತ, ಮತ್ತು ಕಥಾರಚನೆ ತರಬೇತಿ ಪಡೆದಿದ್ದು ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಿರುನಾಟಕಗಳು, ಸಮೂಹ ಗೀತೆಗಳು, ಸಮೂಹ ನೃತ್ಯಗಳನ್ನು ಮಕ್ಕಳು ಪ್ರಸ್ತುತ ಪಡಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಯೋಜನಾಧಿಕಾರಿಯಾದ ಶ್ರೀಮತಿ ಭಾರತಿ ಶೆಟ್ಟರ್ ಆಗಮಿಸುತ್ತಿದ್ದು, ಅಧ್ಯಕ್ಷರಾಗಿ ಶ್ರೀಮತಿ ಶೋಭಾ ಮಂಗಸೂಳಿ, ಪ್ರಾಚಾರ್ಯರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಗೋಪನಕೊಪ್ಪ, ಅವರು ವಹಿಸಲಿದ್ದು ರಂಗಾಯಣದ ಮಾಜಿ ನಿರ್ದೇಶಕರಾದ ಸುಭಾಷ್ ನರೇಂದ್ರ ಅವರ ಉಪಸ್ಥಿತಿಯಲ್ಲಿ ಅತಿಥಿಗಳಾಗಿ ಶ್ರೀ ಬೆಸಿಲ್ ಡಿಸೋಜಾ, ಶ್ರೀಮತಿ ಜಯಶ್ರೀ ವರೂರ,ಹಾಗೂ ಮೇನಕಾ ಮಠದ ಅವರು ಭಾಗವಹಿಸಲಿದ್ದಾರೆ.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ರಶ್ಮಿ ಎಂ, ಜ್ಯೋತಿ ಗಲಗಲಿ, ಸುನಂದಾ ನಿಂಬನಗೌಡರ, ಹಾಗೂ ಸಿಕಂದರ್ ದಂಡಿನ ಅವರು ಸಂಪನ್ಮೂಲ ವ್ಯಕ್ತಿ ಗಳಾಗಿ ತರಬೇತಿ ನೀಡಿರುವರು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.

Edited By :
Kshetra Samachara

Kshetra Samachara

20/07/2022 09:03 pm

Cinque Terre

6.5 K

Cinque Terre

0

ಸಂಬಂಧಿತ ಸುದ್ದಿ