ನವಲಗುಂದ : ನವಲಗುಂದ ಪೋಲೀಸ್ ಠಾಣೆಯಗೆ ನೂತನ ಪಿಎಸ್ಐ ಆಗಿ ನವೀನ ಜಕಲಿ ಅವರು ನೇಮಕಗೊಂಡ ಹಿನ್ನಲೆ ಅವರಿಗೆ ಸನ್ಮಾನಿಸಿ, ಬರಮಾಡಿಕೊಂಡರು. ಈ ಮೊದಲು ಪಿಎಸ್ಐಯಾಗಿ ಕರ್ತವ್ಯ ನಿರ್ವಹಿಸಿದ್ದ ಕಲ್ಮೇಶ ಬೆನ್ನೂರ ಅವರನ್ನು ಬೀಳ್ಕೊಟ್ಟರು.
ಹೌದು ನವಲಗುಂದ ಪಟ್ಟಣದಲ್ಲಿನ ಪೋಲಿಸ್ ಠಾಣೆಯಲ್ಲಿ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ನೂತನ ಪಿಎಸ್ಐ ನವೀನ ಜಕಲಿ ಹಾಗೂ ವರ್ಗಾವಣೆಗೊಂಡ ಕಲ್ಮೇಶ ಬೆನ್ನೂರ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಈ ವೇಳೆ ಎಲ್ಲಾ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
09/07/2022 01:45 pm