ಕುಂದಗೋಳ : ಕಳೆದ ಎರೆಡು ವರ್ಷಗಳಿಂದ ಕೊರೊನಾ ಕಾರಣದಿಂದ ಮಂಕಾಗಿದ್ದ ಕುಂದಗೋಳದ ಐತಿಹಾಸಿಕ ಕರಿಬಂಡಿ ಉತ್ಸವ ಇಂದು ಅತಿ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನೆರವೇರಿತು.
ಕಾರ ಹುಣ್ಣಿಮೆ ದಿನ ನಡೆಯುವ ಐತಿಹಾಸಿಕ ಕರಿಬಂಡಿ ಉತ್ಸವಕ್ಕೆ ವಿವಿಧ ಗಣ್ಯರ ಸಮ್ಮುಖದಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರು ಪೂಜೆ ಸಲ್ಲಿಸಿ ಕರಿಬಂಡಿ ಉತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ದತ್ತಾತ್ರೇಯ ದೇವಸ್ಥಾನದಿಂದ ಮೂರಂಗಡಿ ಕೂಟ್ ಬ್ರಹ್ಮಲಿಂಗೇಶ್ವರ ದೇವಸ್ಥಾನ ವೀರಗಾರರ ಸಮೇತ ಆಗಮಿಸಿದ ಕರಿಬಂಡಿಗಳಿಗೆ ಯುವಕರ ಸಿಳ್ಳೆ, ಚಪ್ಪಾಳೆ, ಕೇಕೆ ಸದ್ದುಗಳು ಸಾಕ್ಷಿಯಾಗಿದವು.
ಅದರಂತೆ ಇಂದು ಬೆಳಿಗ್ಗೆಯಿಂದಲೇ ಕುಂದಗೋಳದ ಎಲ್ಲ ಜಾನುವಾರುಗಳನ್ನು ರೈತಾಪಿ ಜನತೆ ಒಂದಕ್ಕೊಂದು ವಿಶೇಷ ಎಂಬಂತೆ ಶೃಂಗಾರ ಮಾಡಿಕೊಂಡು ಬ್ರಹ್ಮಲಿಂಗೇಶ್ವರನ ದರ್ಶನ ಪಡೆದು ಮನೆ ಧಾವಿಸಿದರು.
ವೀರಗಾರರು ಸಹ ಐತಿಹಾಸಿಕ ಸಂಭ್ರಮದ ಕರಿಬಂಡಿ ಉತ್ಸವದಲ್ಲಿ ಭಾಗಿಯಾಗಿ ರಾಕ್ಷಸರ ಸಂಹಾರದ ಚರಿತ್ರೆಯ ಕುರುಹನ್ನು ನೆನಪಿಸಿದರು ಜನಸಾಗರದ ಮಧ್ಯೆ ಓಡುವ ಎತ್ತುಗಳ ಓಟ ನೋಡಲು ಎರೆಡು ಕಣ್ಣುಗಳು ಸಾಲದಾಗಿತ್ತು.
Kshetra Samachara
14/06/2022 11:02 pm