ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬಂಡಾಯದ ನೆಲದಲ್ಲಿ ಟಗರಿನ ಕಾಳಗ

ನವಲಗುಂದ : ಟಗರಿನ ಕಾಳಗ ಅಂದಕೂಡಲೇ ಮೈ ರೋಮಾಂಚನವಾಗದೆ ಇರದು. ಅದಕ್ಕೆ ಪ್ರಮುಖ ಕಾರಣ ಟಗರುಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತವೆ. ಇಂತಹ ಅದ್ಬುತ ಕಾಳಗ ನಮ್ಮ ಬಂಡಾಯದ ನೆಲದ ಅಳಗವಾಡಿ ಗ್ರಾಮದಲ್ಲಿ ನಡೆಯಿತು.

ಪ್ರಸ್ತುತ ದಿನಮಾನಗಳಲ್ಲಿ ಟಗರುಗಳ ಸಾಕಣೆ ಪ್ರಮಾಣ ಕಡಿಮೆ ಆಗಿದ್ದರೂ ಸಹ ಸ್ಪರ್ಧೆಯ ತೀವ್ರತೆ ಮಾತ್ರ ಕಮ್ಮಿ ಆಗಿಲ್ಲ. ಎರಡು ಟಗರುಗಳು ಮೈದಾನದಲ್ಲಿ ಜಿದ್ದಾಜಿದ್ದಿನ ಕಾಳಗ ನಡೆಸಿದರೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ. ನೆನ್ನೆ ರಾತ್ರಿ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದ ಕಾಳಗ ಸಹ ಹೀಗೇ ಇತ್ತು.

ಅಳಗವಾಡಿ ಗ್ರಾಮದ ಶ್ರೀ ಮಾರುತಿ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಟಗರಿನ ಕಾಳಗವನ್ನು ಶ್ರೀ ಮಾರುತೇಶ್ವರ ಯುವಕ ಮಂಡಲದ ವತಿಯಿಂದ ಗ್ರಾಮದ ಸಿದ್ದಾಪುರ ರಸ್ತೆಯ ಕುಂಬಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾಳಗದಲ್ಲಿ ಓಪನ್ ಟಗರು, ಆರು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ಹಾಲು ಹಲ್ಲಿನ ಟಗರುಗಳು ಸೆಣಸಾಟಕ್ಕಿಳಿದಿದ್ದವು. ಟಗರುಗಳು ಒಂದಕ್ಕೊಂದು ಗುದ್ದುವುದರ ಮೂಲಕ ಕಾಳಗ ನಡೆಸಿ, ನೆರೆದಿದ್ದ ನೂರಾರು ಜನರಲ್ಲಿ ರೋಮಾಂಚನ ಮೂಡಿಸಿದವು.

Edited By : PublicNext Desk
Kshetra Samachara

Kshetra Samachara

03/06/2022 07:36 am

Cinque Terre

30.65 K

Cinque Terre

0

ಸಂಬಂಧಿತ ಸುದ್ದಿ