ಹುಬ್ಬಳ್ಳಿ: ಎಸ್‌ಎಸ್‌ಕೆ ಮಿತ್ರ ಮಂಡಳಿ ವಿದ್ಯಾನಗರ ಇವರ ನೇತೃತ್ವದಲ್ಲಿ ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ, ಮೈತ್ರಿ ಮಹಿಳಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 61 ಮಕ್ಕಳ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ, ಮಕ್ಕಳಿಗೆ ಹೋಮಯಾನದಲ್ಲಿ ಪೂಜೆ ಶ್ರೀಗಳಿಂದ ಪ್ರವಚನಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಿದವು.
ಈ ಉಪನಯನ ಕಾರ್ಯಕ್ರಮದಲ್ಲಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದು, ಸಮಾಜದ ಧರ್ಮದರ್ಶಿಗಳ ನೀಲಕಂಠಸಾ ಜಡಿ, ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯ ಕಿಶನ್ ಬೆಳಗಾವಿ, ಎನ್.ಆರ್ ಹಬೀಬ್, ನಾಗರಾಜ್ ಪಟ್ಟಣ, ಸರಳಾ ಭಾಂಡಗೆ, ರಜತ್ ಉಳಾಗಡ್ಡಿಮಠ ಮತ್ತು ಅನೇಕರು ಉಪಸ್ಥಿತರಿದ್ದರು.
Kshetra Samachara
12/05/2022 10:01 pm