ಹುಬ್ಬಳ್ಳಿ: ಚೆಲುವ ಕನ್ನಡನಾಡು ಸಾಂಸ್ಕೃತಿಕ ಸಂಸ್ಥೆ, ಹುಬ್ಬಳ್ಳಿ ತಾಲೂಕು ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಮಹಾದೇವಿ ಬಡಿಗೇರ ಅವರು ರಚಿಸಿದ ಚುಕ್ಕಿ ಚಲ್ಯಾವು ಎಂಬುವಂತ ಕವನ ಸಂಕಲನ ಲೋಕಾರ್ಪಣೆಗೊಳಿಸಲಾಯಿತು.
ಕವನ ಸಂಕಲನವನ್ನು ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಲಿಂಗರಾಜ ಅಂಗಡಿ, ಹಿರಿಯ ಸಾಹಿತಿಗಳಾದ ಕೆ.ಎಸ್.ಕೌಜಲಗಿ ಚಾಲನೆ ನೀಡಿದರು.
ಬಳಿಕ ಕವನ ಸಂಕಲನದ ಬಗ್ಗೆ ಮಾತನಾಡಿದ ಕೆ.ಎಸ್.ಕೌಜಲಗಿ ಅವರು, ಸಾಹಿತ್ಯ ಬೆಳಕನ್ನು ತೋರಿಸಬೇಕು. ಅಂದರಿಗೆ ತೋರಿಸುವ ಜ್ಯೋತಿಯಾಗಬೇಕು ಅಂದಾಗ ಸಾಹಿತ್ಯ ಕೃಷಿಗೆ ಅರ್ಥ ಬರುತ್ತದೆ. ಚುಕ್ಕಿ ಚೆಲ್ಯಾವು ಕವನ ಸಂಕಲನ ಕವಿಯೊಬ್ಬರ ಅಂತರಾಳದ ಭಾವನೆಗಳು ಅಕ್ಷರಗಳಾಗಿ ಬಂದಿವೆ. ಒಂದು ಉತ್ತಮ ಕವನ ಸಂಕಲನ ಇದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಪತ್ರಕರ್ತರಾದ ಗಣಪತಿ ಗಂಗೊಳ್ಳಿ, ಲೋಚನೇಶ ಹೂಗಾರ, ಪ್ರಕಾಶ ನೂಲ್ವಿ ಹಾಗೂ ಯಲ್ಲಪ್ಪ ಸೋಲಾರಗೊಪ್ಪ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಅಲ್ಲದೇ ಕವನ ಸಂಕಲನ ರಚಿಸಿದ ಮಹಾದೇವಿ ಬಡಿಗೇರ ಅವರಿಗೆ ಹಾಗೂ ಮುದ್ರಕರಾದ ಮುತ್ತು ಶಾಂತಪೂರಮಠ ಅವರಿಗೆ ಸ್ವಾಮೀಜಿಯವರು ಆಶೀರ್ವಾದ ಮಾಡಿ ಅಭಿನಂದನೆ ಸಲ್ಲಿಸಿದರು.
Kshetra Samachara
11/05/2022 10:14 pm