ಕುಂದಗೋಳ: ಆಧುನಿಕತೆ ಬೆಳೆದಂತೆ ಎಲ್ಲರೂ ಸಿನಿಮಾ, ಧಾರಾವಾಹಿ ಬೆನ್ನಟ್ಟಿ ಓಡುವ ಕಾಲದಲ್ಲಿ ಇಲ್ಲೋಂದು ಗ್ರಾಮಸ್ಥರು ದೊಡ್ಡಾಟ ಬಯಲಾಟ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
ಹೌದು. ಮೊನ್ನೆಯಷ್ಟೇ ಹಿರೇಹರಕುಣಿ ಗ್ರಾಮಸ್ಥರು ವೀರಭದ್ರೇಶ್ವರ ಆಟದ ಮಂಡಳಿಯವರು ಶ್ರೀ ದೇವಿ ಮಹಾತ್ಮೆ ಅರ್ಥಾತ್ ಮಹಿಷಾಸುರನ ವಧೆ ಎಂಬ ಸುಂದರ ಬಯಲಾಟವನ್ನು ತಾವೇ ತಾಲೀಮು ನಡೆಸಿ ಪ್ರದರ್ಶನ ನೀಡಿದ್ದರು. ಇದೀಗ ಆ ಸಾಲಿಗೆ ಹೊಸ ಸೇರ್ಪಡೆ ಎಂಬಂತೆ ಹಿರೇಹರಕುಣಿ ಗ್ರಾಮದ ಮಕ್ಕಳು ಸಹ ಶ್ರೀ ಬಸವೇಶ್ವರ ಆಟದ ಮಂಡಳಿಯಲ್ಲಿ ನಿತ್ಯ ತಾಲೀಮು ನಡೆಸಿ ಸ್ರ್ತೀ ಪಾತ್ರ ಒಳಗೊಂಡಂತೆ ತಾವೇ ವಾಲಿ ಸುಗ್ರೀವರ ಕಾಳಗ ಎಂಬ ಬಯಲಾಟವನ್ನು ನಿತ್ಯ ತಾಲೀಮು ನಡೆಸಿ ಪ್ರದರ್ಶನ ಮಾಡಿ ಜನರ ಮನ ಗೆದ್ದಿದ್ದಾರೆ.
ಬಯಲಾಟ ಮಾಡುವುದು ಸರಿ, ಅಷ್ಟೇ ಉತ್ಸಾಹದಿಂದ ಹೆಣ್ಣು ಗಂಡು ಮಕ್ಕಳು ಸಹ ಭಾಗಿಯಾಗಿ ಬಣ್ಣ ಹಚ್ಚಿ ವಾಲಿ ಸುಗ್ರೀವರ ಕಾಳಗದ ಬಯಲಾಟ ಜನರ ರಂಜಿಸಿದೆ.
Kshetra Samachara
07/05/2022 09:21 pm