ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಅನೇಕ ಬಿರುದುಗಳಿವೆ. ವಿದ್ಯಾಕಾಶಿ, ಸಾಂಸ್ಕ್ರತಿಕ ನಗರಿ, ಸಾಹಿತಿಗಳ ತವರೂರು, ಹೀಗೆ ಅನೇಕ ಹೇಸರುಗಳಿಂದ ಈ ಅವಳಿ ನಗರಗಳು ಸಂಬೋಧಿಸ್ಪಡುತ್ತವೆ.
ಈ ಅವಳಿ ನಗರದಲ್ಲಿ ಅನೇಕ ದಿಗ್ಗಜ ಕಲಾವಿದ ಹೆಸರು ಕೇಳಿದರೆ ಸಾಕು, ನಮ್ಮ ಜಿಲ್ಲೆಯವರು ಎಂದು ಮೈ ಪುಳಕಗೊಳ್ಳುತ್ತದೆ. ಹೀಗೆ ಜಿಲ್ಲೆಯ ದಿಗ್ಗಜ ಕಲಾವಿದರಾದ ಕುಂದಗೋಳದ ಸವಾಯಿ ಗಂಧರ್ವ ನಾನಾ ಸಾಹೇಬ್ ನಾಡಿಗೇರ್, ಪೋಷಕರಾದ ವಿದುಷಿ ಡಾ.ಗಂಗೂಬಾಯಿ ಹಾನಗಲ್, ಡಾ.ಜೆ.ವಿ ಜೋಶಿ, ಹೀಗೆ ಅನೇಕ ದಿಗ್ಗಜರು ಮತ್ತು ಹುಬ್ಬಳ್ಳಿಯ ಪ್ರಮುಖ ನಾಗರಿಕರೊಂದಿಗೆ 1946 ರಲ್ಲಿ ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ಪ್ರಾರಂಭಿಸಲಾಯಿತು.
ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ಕಳೆದ 75 ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಂದಿದೆ. ಈಗ ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ವಜ್ರ ಮಹೋತ್ಸವನ್ನು ಏಪ್ರಿಲ್ 29 ರಿಂದ ಮೆ.1 ರ ವರೆಗೆ ಮೂರು ದಿನಗಳಕಾಲ ಭವ್ಯಕಾರ್ಯಕ್ರಮ ಆಯೋಜಿಸಲಾಗಿದೆ,
ಮೊದಲನೆ ದಿನ ಏಪ್ರಿಲ್ 29 ರಂದು ಸಂಜೆ 6.ರಿಂದ 7 ರವರೆಗೆ ಖ್ಯಾತ ತಬಲಾ ವಾದಕರಾದ ಪಂಡಿತ ರವೀಂದ್ರ ಯಾವಗಲ್ ಹಾಗೂ ರವೀಂದ್ರ ಕಾಟೋಟಿ ಅವರಿಂದ ತಬಲಾ ಸೋಲೋ. 7 ರಿಂದ 9ರವರೆಗೆ ಪಂಡತ್ ಜಯತೀರ್ಥ ಮೇವುಂಡಿ ಅವರಿಂದ ಹಿಂದೂಸ್ಥಾನಿ ಸಂಗೀತ. ತಬಲಾ ಸಾಥ್ ಉದಯ ಕರ್ಪೂರ್ ಹಾಗೂ ಹಾರ್ಮೋನಿಯಂ ಸಾಥ್ : ಡಾ : ಸುಧಾಂಶು ಕುಲಕರ್ಣಿ.
ಏಪ್ರಿಲ್ 30 ರಂದು ಎರಡನೆ ದಿನದ ಕಾರ್ಯಕ್ರಮ ದಿ.ಮೋಹನ್ ರಾವ್ ಶಿರೂರ್ ಅವರಿಗೆ ಸಮರ್ಪಣೆ. ಬೆಳಿಗ್ಗೆ 9.30 ರಿಂದ 10.45 ರವರೆಗೆ ಸಂಗೀತ ಪಂಡಿತ್ ಅಶೋಕ ನಾಡಿಗೇರ ಮತ್ತು 11 ಘಂಟೆಗೆ ಪಂಡಿತ್ ವೆಂಕಟೇಶಕುಮಾರ ಶಾಸ್ತ್ರೀಯ ಸಂಗೀತ, ಅದೇ ದಿನ ಸಂಜೆ 5.30 ರಿಂದ 6.30 ರವರೆಗೆ ಡಾ.ಮಿತಾ ಪಂಡಿತ್ ಅವರಿಂದ ಗಾಯನ. ಇವರೆಲ್ಲರಿಗೂ ಉದಯ ಕರ್ಪೂರ್ ತಬಲಾ ಸಾಥ್ ಹಾಗೂ ಡಾ : ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಸಂಜೆ 6.30 ರಿಂದ 8.00 ವರೆಗೆ ಸಿತಾರ ಜುಗಲ್ ಬಂದಿ, ಮತ್ತು 8.00 ರಿಂದ 9.30ರ ವರೆಗೆ ಪಂಡಿತ ಹರೀಶ ತಿವಾರಿ ಅವರಿಂದ ಸಂಗೀತ ಗಾಯನ ನಡೆಯಲಿದೆ. ಮತ್ತು ಸಾಯಂಕಾಲ 6:30 ಯಿಂದ 7:30 ವರೆಗೆ ಶಫಿಕ್ ಖಾನ್ ಮತ್ತು ರಫಿಕ್ ಖಾನ್ ಸಿತಾರ್ ಜುಗಲ್ ಬಂದಿ. ರವೀಂದ್ರ ಯಾವಗಲ್ ತಬಲಾ ಸಾಥ್ ಹಾಗೂ ರವೀಂದ್ರ ಕಾಟೋಟಿ ಹಾರ್ಮೋನಿಯಂ.
ಮೂರನೆ ದಿನ ಮೆ.1 ಬೆಳಿಗ್ಗೆ 9.30 ರಿಂದ 10.30 ರವರೆಗೆ ಪದ್ಮಿನಿ ರಾವ್ ಅವರಿಂದ ಗಾಯನ,
10.30 ರಿಂದ 12.30 ವರೆಗೆ ಪಂಡಿತ್ ರೋನು ಮಜುಮದಾರ್ ಅವರಿಂದ ಕೊಳಲು, ಪಂಡೀತ ರಘುನಾಥ ನಾಕೋಡ್ ತಬಲಾ ಸಾಥ್. ಸಂಜೆ 5.30 ರಿಂದ 7.00 ರ ವರೆಗೆ ಉಸ್ತಾದ ಜೀಸೆನ್ ಖಾನ್ ಅವರಿಂದ ಸಂಗೀತ ಕಾರ್ಯಕ್ರಮ. ಉದಯ್ ಕರ್ಪೂರ್ ತಬಲಾ ಸಾಥ್.
ಮೆ.1 ಕೊನೆಯ ದಿನದಂದು ಕೇಂದ್ರ ಸಚಿವ ಪ್ರಲ್ದಾದ್ ಜೋಶಿ ಅವರ ಅಧ್ಯಕ್ಷತೆಯಲ್ಲಿ, ವಿದುಷಿ ಅಶ್ವಿನಿ ಭಿಡೆ ಹಾಗೂ ದೇಶಪಾಂಡೆ ಅವರ ಸಂಗಿತದೋಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ. ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ಪ್ರಾರಂಭದಿಂದಲೂ ವಿದುಷಿ ಡಾ. ಗಂಗೂಬಾಯಿ ಹಾನಗಲ್ ಅವರ ಪುತ್ರರಾದ ಬಾಬುರಾವ್ ಹಾನಗಲ್ ಅವರ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನದ ಸಾಧನೆಯ ಪ್ರಶಸ್ತಿ ನೀಡಲಾಗುತ್ತದೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ನಡೆಯಲಿದ್ದು ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ....
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/04/2022 06:14 pm