ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿರಿಯ ಪತ್ರಕರ್ತ ಡಾ.ಶಿವರಾಮ ಅಸುಂಡಿಯವರ ಕೃತಿಗಳ ಬಿಡುಗಡೆ

ಹುಬ್ಬಳ್ಳಿ: ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ಪ್ರಕಟಿಸಿದ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಡಾ.ಶಿವರಾಮ್ ಅಸುಂಡಿಯವರ ಕೋಣನ ಮುಂದೆ ಕಿನ್ನರಿ , ಮತ್ತೆರಡು ನಾಟಕ ಹಾಗೂ ಚಿತ್ರಂ ಭಳಾರೆ ವಿಚಿತ್ರಂ ಕೃತಿಗಳನ್ನು ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ ಬಿಡುಗಡೆಗೊಳಿಸಿದರು.

ಹುಬ್ಬಳ್ಳಿಯ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪತ್ರಿಕೋದ್ಯಮದ ಬ್ಯೂಸಿ ಬದುಕಿನಲ್ಲಿ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ ಎಂದರು.

ತಮ್ಮ ವೃತ್ತಿ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಓದುಗರ ಮುಂದೆ ಇಡುವಂತ ಕಾರ್ಯಕ್ಕೆ ಡಾ.ಶಿವರಾಮ ಅಸುಂಡಿಯವರು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರು ಅಭಿನಂದನೆ ಸಲ್ಲಿಸಿದರು.

ಇನ್ನೂ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಗಣಪತಿ ಗಂಗೊಳ್ಳಿ, ರಶ್ಮಿ.ಎಸ್., ಹಿರಿಯ ಸಾಹಿತಿಗಳಾದ ಮಹಾಂತಪ್ಪ ನಂದೂರ, ಡಾ.ಎಂ.ಬೈರೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

15/04/2022 01:24 pm

Cinque Terre

10.8 K

Cinque Terre

0

ಸಂಬಂಧಿತ ಸುದ್ದಿ