ಇಷ್ಟ ಸಿದ್ದಿ ಕಾಮಣ್ಣನ ದರ್ಶನ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮೊದಲನೇ ದಿನಕ್ಕಿಂತ ಇಂದು ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆಡಳಿತ ಮಂಡಳಿ ಹಾಗೂ ಪೊಲೀಸರು ಭಕ್ತರ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಕೋವಿಡ್ ನಿಂದಾಗಿ ಕಳೆದ ವರ್ಷ ರಾಮಲಿಂಗೇಶ್ವರ ಕಾಮಣ್ಣ ದರ್ಶನಕ್ಕೆ ಜಿಲ್ಲಾಡಳಿತದಿಂದ ಬ್ರೇಕ್ ಹಾಕಲಾಗಿತ್ತು. ಈ ವರ್ಷ ಮತ್ತೆ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಕಾಮಣ್ಣನ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಎರಡನೇ ದಿನವಾದ ಇಂದು ಭಕ್ತ ಸಾಗರ ದೇವಸ್ಥಾನದತ್ತ ಹರಿದು ಬಂದಿತ್ತು.
Kshetra Samachara
16/03/2022 11:19 am