ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಿಕ್ಷಕರೇ ಮಹಿಳಾ ದಿನಾಚರಣೆ, ಪ್ರಶಸ್ತಿ ಪ್ರದಾನ ಹಿಂಗ್ಯಾಕೆ ?

ಕುಂದಗೋಳ : ಒಂದು ಸಮಯದಲ್ಲಿ ಶಿಕ್ಷಣ ಕೇವಲ ಉನ್ನತ ಜನರ ಸ್ವತ್ತಾಗಿತ್ತು, ಆ ದಿನಗಳಲ್ಲೇ ಶಿಕ್ಷಣ ಎಲ್ಲರ ಸ್ವತ್ತು ಎಂದು ಸಾರಿ ಮಹಿಳೆಯರಿಗೂ ಶಿಕ್ಷಣ ನೀಡಿದವರೇ ಸಾವಿತ್ರಿಬಾಯಿ ಫುಲೆ ಎಂದು ಕಲ್ಯಾಣಪುರ ಬಸವಣ್ಣನವರು ಹೇಳಿದರು.

ಅವರು ಕುಂದಗೋಳ ತಾಲೂಕ ಘಟಕ ಸವಾಯಿ ಗಂಧರ್ವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕಾರ್ಯಾಗಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಮಹಿಳಾ ದಿನಾಚರಣೆ ಗೌರವ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಸಿಗಲು ಸಾವಿತ್ರಿಬಾಯಿ ಫುಲೆ ಕೈಗೊಂಡ ಶ್ರೇಷ್ಠ ಕಾರ್ಯದ ಫಲ ಎಂದರು.

ಇನ್ನೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಸರ್ವ ಪದಾಧಿಕಾರಿಗಳು ವೇದಿಕೆ ಮುಂದಿನ ಸಾಲಲ್ಲಿ ಉಪಸ್ಥಿತರಿದ್ದು, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲೇ ಮಹಿಳೆಯನ್ನು ವೇದಿಕೆಯ ಎರಡನೇ ಸಾಲಿನಲ್ಲಿ ಕುಳಿತಿದ್ದು ಕಂಡು ಬಂದಿತು, ಇದಲ್ಲದೆ ಶಿಕ್ಷಕರ ಕಾರ್ಯಕ್ರಮದ ಬ್ಯಾನರ್'ನಲ್ಲಿ (ಪ್ರಧಾನ) ಪ್ರದಾನ ಎಂಬ ಪದ ತಪ್ಪಾಗಿ ಮುದ್ರಿಸಿದ್ದು ಕಂಡು ಬಂದಿತು.

ಇನ್ನೂ ವೇದಿಕೆಯಲ್ಲಿ ಉಪಸ್ಥಿತರಿದ್ದು ಎಲ್ಲ ಗಣ್ಯಮಾನ್ಯರಿಗೆ ಸನ್ಮಾನ ಮಾಡಿದ ಬಳಿಕ ಕೊನೆಯಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಅರ್ಧದಷ್ಟು ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದು ಖಾಲಿ ಕುರ್ಚಿಗಳು ಕಂಡು ಬಂದವು.

Edited By : Nagesh Gaonkar
Kshetra Samachara

Kshetra Samachara

15/03/2022 07:40 am

Cinque Terre

59.66 K

Cinque Terre

0

ಸಂಬಂಧಿತ ಸುದ್ದಿ