ಕುಂದಗೋಳ: ಕೊರೊನಾ ಕಹಿ ದಿನಗಳನ್ನು ಮರೆತು ಮತ್ತೆ ಜಾತ್ರೆ, ದಿಬ್ಬಣ, ಉತ್ಸವ ಆರಂಭಗೊಂಡಿವೆ. ಅದರಂತೆ ಸಂತ ಶಿಶುನಾಳ ಶರೀಫರ ಜಾತ್ರೆ ನಾಳೆ ನಡೆಯಲಿದ್ದು, ಇಂದು ಕುಂದಗೋಳದ ಬಂಡಿ ಶರೀಫಗಿರಿಗೆ ಪ್ರಯಾಣ ಬೆಳೆಸಿದೆ.
ಪಟ್ಟಣದ ಗಣಪತಿ ದೇವಸ್ಥಾನದಿಂದ ಗಜಾನನ ಭಜನಾ ಸಂಘದ ಗುರು ಹಿರಿಯರು, ಯುವಕರು ಸೇರಿ ಕಳೆದ 50 ವರ್ಷಗಳಿಂದ ಸಂತ ಶಿಶುನಾಳ ಶರೀಫರ ಜಾತ್ರೆಗೆ ಬಂಡಿ ಹೂಡುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ. ಅದರಂತೆ ಈ ಪ್ರತಿ ವರ್ಷದ ಮಂಟಪದ ಬಂಡಿ ಬದಲಾಗಿ ಆನೆ ಆಕಾರದ ಬಂಡಿ ಮಾಡಿಕೊಂಡು ಜಾತ್ರೆಗೆ ತರಳಿ, ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಕೈಗೊಳ್ಳಲು ದವಸ ಧಾನ್ಯ, ತರಕಾರಿ ಸಹ ಸಂಗ್ರಹಿಸಿಕೊಂಡು ಬಂಡಿ ಮೂಲಕ ಶಿಶುವಿನಹಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಒಟ್ಟಾರೆ ಬಂಡಿ ಹೂಡಿಕೊಂಡು ಕಳೆದ ಐವತ್ತು ವರ್ಷಗಳಿಂದ ಜಾತ್ರೆಗೆ ತೆರಳಿ ಹಳ್ಳಿ ಹಳ್ಳಿಗೆ ಭಕ್ತಿ ಸೊಗಡನ್ನು ಸಾರುತ್ತಿರುವ ಸಂತ ಶಿಶುನಾಳ ಶರೀಫರ ಮಡದಿ ಗ್ರಾಮ ಕುಂದಗೋಳದ ಜನರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
12/03/2022 09:14 pm