ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರೈತ ಮಹಿಳೆಯರಿಗೆ ಹೆಚ್ಚಿನ ಗೌರವ ಸಿಗಲಿ - ಕಿಸಾನ್ ಗೋಷ್ಠಿ

ಕುಂದಗೋಳ : ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆತ್ಮ ಯೋಜನೆಯ ಕಿಸಾನ್ ಗೋಷ್ಠಿ ದಿನವನ್ನಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಪ್ರಗತಿಪರ ರೈತ ಮಾಹಾಂತೇಶ ತಡಸದ ಉದ್ಘಾಟಿಸಿ ಮಾತನಾಡಿ ರೈತ ಮಹಿಳೆಯರಿಗೆ ಸರ್ಕಾರವು ಹೆಚ್ಚು ಆದ್ಯತೆ ನೀಡಬೇಕು ಅಂದಾಗ ಮಹಿಳೆಯರಿಗೆ ಹೆಚ್ಚಿನ ಗೌರವ ಪ್ರಾಶಸ್ತ್ಯ ದೊರಕುತ್ತದೆ ಎಂದರು.

ಕೃಷಿ ಇಲಾಖೆಯ ತಾಂತ್ರಿಕ ಆತ್ಮ ಯೋಜನೆಯ ಅಧಿಕಾರಿ ಶ್ರೀದೇವಿ ಆಲೂರಿ ಮಾತನಾಡಿ ರೈತ ಸಂಪರ್ಕ ಕೇಂದ್ರದಲ್ಲಿರುವ ಮಹಿಳಾ ಯೋಜನೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಸೌದಿ, ಬಸವರಾಜ ಯೋಗಪ್ಪನವರ, ಸರೋಜಾ ಪಾಟೀಲ್, ಮಂಜುಳಾ ರೊಟ್ಟಿಗವಾಡ, ಶಾಂತಮ್ಮ ನೇಕಾರ ಹಾಗೂ ಗ್ರಾಮದ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : Shivu K
Kshetra Samachara

Kshetra Samachara

09/03/2022 08:23 am

Cinque Terre

27.69 K

Cinque Terre

0

ಸಂಬಂಧಿತ ಸುದ್ದಿ