ಕುಂದಗೋಳ : ಮಹಾಶಿವರಾತ್ರಿ ನಿಮಿತ್ತವಾಗಿ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಶಂಕರಲಿಂಗೇಶ್ವರನಿಗೆ ವಿಶೇಷ ಪೂಜೆ ಪುಷ್ಪಗಳ ಅಲಂಕಾರ ಸಲ್ಲಿಸಲಾಗಿದ್ದು ದೇವಸ್ಥಾನದ ಎಡೆಗೆ ಭಕ್ತರ ಆಗಮನ ಹೆಚ್ಚಿದೆ.
ಹೌದು ! ಬೃಹತ್ ಹೋಬಳಿ ಗ್ರಾಮ ಸಂಶಿಯಲ್ಲಿ ನೆಲೆನಿಂತ ಶಂಕರಲಿಂಗೇಶ್ವರನಿಗೆ ಮಹಿಳೆಯರು, ಮಕ್ಕಳು, ನಾಗರೀಕರು ತಂಡೋಪ ತಂಡವಾಗಿ ಆಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿ ಶಂಕರಲಿಂಗನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಹೂಗಳ ಅಲಂಕಾರದಲ್ಲಿ ಮಿಂದೆದ್ದ ಶಂಕರಲಿಂಗೇಶ್ವರನಿಗೆ ವರಸಿದ್ಧಿ ವಿನಾಯಕನಿಗೆ ಮಹಾಶಿವರಾತ್ರಿ ನಿಮಿತ್ತ ಭಕ್ತರು ವಿಶೇಷ ನೈವೇದ್ಯ ಸಮರ್ಪಣೆ ಮಾಡಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
Kshetra Samachara
02/03/2022 10:00 am