ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಹುತಾತ್ಮ ವೀರಯೋಧನ ನೆನಪಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ

ಅಣ್ಣಿಗೇರಿ; ಅಣ್ಣಿಗೇರಿ ತಾಲೂಕಿನ ಸೈದಾಪುರ ಗ್ರಾಮದ ಹುತಾತ್ಮ ವೀರಯೋಧ ಹಸನ್ ಸಾಬ್ ಖುದಾವಂದ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆ ಸೈದಾಪುರದಲ್ಲಿ ಶನಿವಾರ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಸರಿಗಮಪ ಖ್ಯಾತಿಯ ಗಾಯಕ ಶ್ರೀ ರಾಮ್ ಕಾಸರ್, ಮಜಾ ಭಾರತದ ಹಾಸ್ಯ ಕಲಾವಿದ ಬಸವರಾಜ ಗುಂಡಪ್ಪನವರ, ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಕಾಸಿಂ ಅಲಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ವಿಜೇತೆ ಹಾಗೂ ಕನ್ನಡ ಕೋಗಿಲೆಯ ಖ್ಯಾತಿಯ ಬಾಲ ಗಾಯಕಿ ಮಹಾನ್ಯ ಗುರು ಪಾಟೀಲ್ ಹಾಗೂ ಮಜಾ ಟಾಕೀಸ್ ಹಾಸ್ಯ ಕಲಾವಿದ ಮಹಾಂತೇಶ್ ಹಡಪದ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು. ಇನ್ನು ಕಾರ್ಯಕ್ರಮ ನೋಡಲು ತಾಲೂಕಿನ ಸುತ್ತಮುತ್ತ ಹಳ್ಳಿಗಳಿಂದ ನೂರಾರು ಜನ ಆಗಮಿಸಿದರು.

Edited By : Nagesh Gaonkar
Kshetra Samachara

Kshetra Samachara

28/02/2022 06:10 pm

Cinque Terre

18.02 K

Cinque Terre

0

ಸಂಬಂಧಿತ ಸುದ್ದಿ