ಹುಬ್ಬಳ್ಳಿ: ಕಲಾ ಸುಜಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಫೆ.27 ರಂದು ಸಂಜೆ 5 ಗಂಟೆಗೆ ನೃತ್ಯ ಸುಂದರ ವಸುಂದರ ರಾಷ್ಟ್ರೀಯ ನೃತ್ಯೋತ್ಸವವನ್ನು ನಗರದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಕಲಾ ಸುಜಯ ಕಮಿಟಿಯ ಸದಸ್ಯ ಸುಜಯ ಶಾನಬಾಗ ಹೇಳಿದ್ದಾರೆ.
ಕಳೆದ 7 ವರ್ಷಗಳಿಂದ ಹುಬ್ಬಳ್ಳಿ, ಲಕ್ಷ್ಮೇಶ್ವರ ಮತ್ತು ಬೆಂಗಳೂರಿನಲ್ಲಿ ಭರತನಾಟ್ಯ ತರಗತಿಗಳನ್ನು ಯಶಸ್ವಿಯಾಗಿ ಕಲಾ ಸುಜಯ ನಡೆಸಿಕೊಂಡು ಬರಲಾಗಿದೆ. ಪ್ರತಿ ವರ್ಷ ನೃತ್ಯ ಸುಂದರ ವಸುಂದರ ನೃತ್ಯ ಹಬ್ಬವನ್ನು ಆಯೋಜಿಸುತ್ತಾ ಬರುತ್ತಿದೆ. ಅದರಂತೆ ಈ ವರ್ಷವು ಪುರಂದರ ದಾಸರ ಗೌರವಾರ್ಥ ಪುರಂದರ ನಮನ ನೃತ್ಯ ರೂಪಕ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗಂಗಾವತಿ ಪ್ರಾಣೇಶ, ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ನ ಗುಜ್ಜಾಡಿ ಗೋಪಾಲಕೃಷ್ಣ ನಾಯಕ ಸೇರಿದಂತೆ ಮುಂತಾದ ಗಣಮಾನ್ಯರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
Kshetra Samachara
25/02/2022 01:24 pm