ಕುಂದಗೋಳ : ಗ್ರಾಮದಲ್ಲಿ ಫೆ.14 ರಿಂದ 15 ರವರೆಗೆ ನೂತನವಾಗಿ ಜೀರ್ಣೋದ್ಧಾರಗೊಳಿಸಿದ ಶ್ರೀ ವೀರಾಂಜನೇಯ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.
ಹರ-ಗುರು-ಚರ ಮೂರ್ತಿಗಳ ಅಪ್ಪಣೆಯ ಮೇರೆಗೆ ಫೆ.14 ರಂದು ಸೋಮವಾರ ಮಧ್ಯಾಹ್ನ 2:30 ಕ್ಕೆ ವಿವಿಧ ಸಂಗೀತ ವಾದ್ಯಮೇಳದೊಂದಿಗೆ ಶ್ರೀ ವೀರಾಂಜನೇಯ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುಲಿದೆ.
ಫೆ.15 ರಂದು ಮಂಗಳವಾರ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ವೀರಾಂಜನೇಯ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಜಗದ್ಗುರುಗಳ ಸಮ್ಮುಖದಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಸಂಜೆ 5:30 ಕ್ಕೆ ನೂತನ ದೇವಸ್ಥಾನದ ಆವರಣದಲ್ಲಿ ಸರ್ವ ಧರ್ಮಗಳ ಧಾರ್ಮಿಕ ಸಭೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು, ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಮಹಾಸ್ವಾಮಿಗಳು, ಸಿದ್ಧಾರೂಡ ಮಠದ ಶ್ರೀ ನಿರ್ಗುಣಾನಂದ ಮಹಾಸ್ವಾಮಿಗಳು, ವಿರಕ್ತಮಠದ ಶ್ರೀ ಚನ್ನಬಸವದೇವರು, ಹೋತನಹಳ್ಳಿಯ ಶ್ರೀ ಪ್ರಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ವೀರಾಂಜನೇಯ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಂಕ್ರಪ್ಪ ಬ್ಯಾಹಟ್ಟಿ ತಿಳಿಸಿದ್ದಾರೆ.
Kshetra Samachara
13/02/2022 07:18 pm