ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೂಲ ಜಾನಪದಕ್ಕೆ ಧಕ್ಕೆ ತರಬೇಡಿ: ಜೋಗತಿ ಮಂಜಮ್ಮ

ಧಾರವಾಡ: ಇಂದು ಅವರವರ ಹವ್ಯಾಸಕ್ಕೆ ಹಾಗೂ ಸಂತೋಷಕ್ಕೆ ಬೇರೆ ಶೈಲಿಯ ಜಾನಪದ ಹಾಡುಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅಂತವರು ಮೂಲ ಜಾನಪದಕ್ಕೆ ಧಕ್ಕೆ ತರದಂತೆ ತಮ್ಮ ಜಾನಪದ ಸಾಹಿತ್ಯ ರಚನೆ ಮಾಡಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಮನವಿ ಮಾಡಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಗಭೂಮಿ, ಸಿನಿಮಾ ಸೇರಿದಂತೆ ಇತರ ಕಲಾಪ್ರಕಾರಗಳಿಗೆ ತಾಯಿ ಬೇರೇ ಜಾನಪದ. ಈ ಜಾನಪದ ಎಂದಿಗೂ ಮರೆಯಾಗುವುದಿಲ್ಲ. ಜಾನಪದ ಕ್ಷೇತ್ರ ನಶಿಸಿ ಹೋಗುತ್ತಿದೆ ಎನ್ನುವ ಮಾತು ಸುಳ್ಳು. ಯುವಕರು ಜಾನಪದದತ್ತ ಮುಖ ಮಾಡುತ್ತಿದ್ದಾರೆ. ಹೊಸ ಪ್ರಕಾರದ ಜಾನಪದ ಹಾಡುಗಳು ಇಂದು ಬರುತ್ತಿವೆ. ಅವರವರ ಸಂತೋಷಕ್ಕೆ ಜಾನಪದ ರಚಿಸಿದರೂ ಅಂತವರು ಮೂಲ ಜಾನಪದಕ್ಕೆ ಧಕ್ಕೆಯನ್ನುಂಟು ಮಾಡಬಾರದು ಎಂದರು.

ಜೋಗತಿ ನೃತ್ಯವನ್ನು ಕೇವಲ ದೇವದಾಸಿಯರು ಹಾಗೂ ಮುತ್ತು ಹೊತ್ತವರ ಮಾತ್ರ ಮಾಡಬೇಕು ಎನ್ನುತ್ತಿದ್ದರು. ಆದರೆ, ನಾನು ಜೋಗತಿ ನೃತ್ಯ ಮಾಡಲು ಪ್ರಾರಂಭಿಸಿದಾಗಿನಿಂದ ಅನೇಕ ಯುವಕರು ಆ ಕಲೆಯನ್ನು ಕಲಿತುಕೊಂಡರು. ಇದೀಗ ಅದನ್ನೂ ಜಾನಪದ ಕಲೆಗೆ ಸೇರ್ಪಡಿಸಿದ್ದಾರೆ ಎಂದರು.

ಧಾರವಾಡಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಆಗಾಗ ನಾನು ಧಾರವಾಡಕ್ಕೆ ಬರುತ್ತೇನೆ. ಬೇರೆಯವರ ಕಡೆಯಿಂದ ನಾನು ಪ್ರಶಸ್ತಿ ಪಡೆಯುತ್ತಿದ್ದೆ. ಆದರೆ, ಇಂದು ಹಲವರಿಗೆ ನಾನೇ ಪ್ರಶಸ್ತಿ ಪ್ರದಾನ ಮಾಡುವ ಅವಕಾಶ ಸಿಕ್ಕಿತ್ತು. ಆ ಉದ್ದೇಶಕ್ಕಾಗಿ ಧಾರವಾಡಕ್ಕೆ ಬಂದಿದ್ದೆ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2022 05:46 pm

Cinque Terre

93.04 K

Cinque Terre

4

ಸಂಬಂಧಿತ ಸುದ್ದಿ