ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಜಾನಪದ ಕಾರ್ಯಕ್ರಮ

ಅಣ್ಣಿಗೇರಿ : ಭಾರತ ಸರ್ಕಾರ ನೆಹರು ಯುವ ಕೇಂದ್ರ ಧಾರವಾಡ, ಆದಿಕವಿ ಪಂಪ ಕನ್ನಡ ಬಳಗ ಅಣ್ಣಿಗೇರಿ, ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಚಂಬಣ್ಣ ಹಾಳದೋಟರ್ ಆಗಮಿಸಿ, ಜಾನಪದ ಕಲಾವಿದರನ್ನು ನಾವು ಹೆಚ್ಚು ಪ್ರೋತ್ಸಾಹಿಸ ಬೇಕಾಗಿರುತ್ತದೆ. ಈ ಒಂದು ಕಾರ್ಯಕ್ರಮಕ್ಕೆ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದು ಮಾತನಾಡಿದರು.

ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಧಾನ ಗುರುಗಳು ಎಸ್.ವಿ. ಕುರುಡಿ ಅವರು ವಹಿಸಿದ್ದರು. ಮಕ್ಕಳು ಜಾನಪದ ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು.

ಈ ವೇಳೆ ವೀರೇಶ್ ಕುಬಸದ, ರಫೀಕ್ ಮುಳುಗುಂದ, ಪ್ರಕಾಶ್, ನಿಂಗಪ್ಪ ಸುಂಕದ್, ಉಮೇಶ್ ಬಿಲ್ಲದನವರ್, ಕರಬುಡ್ಡಿರವರು,ಜಗದೀಶ್ ಗಾಣಿಗೇರ್, ಈರಣ್ಣ ಗುರಿಕಾರ್, ಹೇಮಂತ್ ಕುರಟ್ಟಿ, ಮಾಂತೇಶ್ ಹಕ್ಕರಿಕಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

28/01/2022 03:19 pm

Cinque Terre

17.15 K

Cinque Terre

0

ಸಂಬಂಧಿತ ಸುದ್ದಿ