ಕುಂದಗೋಳ : ಎಸ್.! ಯುವಕರು ಬದಲಾಗಿದ್ದಾರೆ. ಇದೀಗ ಬದಲಾವಣೆ ಸಹ ಬಯಸುತ್ತಿದ್ದಾರೆ. ಈಗ್ಯಾಕೆ ಈ ಮಾತು ಅಂದ್ರಾ ?
ಹೌದು ! ಕುಂದಗೋಳ ತಾಲೂಕು ಸೇರಿದಂತೆ ವಿವಿಧೆಡೆ ಯುವಕರು ಸೇರಿಕೊಂಡು ಕಲ್ಪತರು ದಿನದ ಅಂಗವಾಗಿ ಸಕಲ ಜೀವರಾಶಿಗಳ ಏಳ್ಗೆಗಾಗಿ ನೂತನ ವರ್ಷದ ಮೊದಲ ದಿನವೇ ಕುಂದಗೋಳ ಶಂಭೋಲಿಂಗೇಶ್ವರ ದೇವಸ್ಥಾನದಿಂದ ಸಂತ ಶಿಶುನಾಳ ಶರೀಫರ ಗದ್ದುಗೆವರೆಗೆ ಬರೋಬ್ಬರಿ 25 ಕಿಲೋ ಮೀಟರ್ ಸದ್ಭಾವನಾ ಪಾದಯಾತ್ರೆ ಕೈಗೊಂಡಿದ್ದಾರೆ.
ಇಂದು ಬೆಳಿಗ್ಗೆ 6 ಗಂಟೆಗೇ ಶಂಭೋಲಿಂಗೇಶ್ವರ ದೇವಸ್ಥಾನದಿಂದ ಯಾತ್ರೆ ಕೈಗೊಂಡ ಯುವಕರು ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ, ಜೈ ಶ್ರೀ ರಾಮ್, ಸ್ವಾಮಿ ವಿವೇಕಾನಂದರ ಘೋಷಣೆ ಕೂಗುತ್ತಾ, ರಾಮಕೃಷ್ಣ ಪರಮಹಂಸರ ಧ್ಯೇಯ ಜಪಿಸುತ್ತಾ ಕೇಸರಿ ಧ್ವಜ ಹಿಡಿದು ಭಾರತಾಂಬೆ, ಸ್ವಾಮಿ ವಿವೇಕಾನಂದ, ಹಾಗೂ ರಾಮಕೃಷ್ಣ ಪರಮಹಂಸರ ಭಾವಚಿತ್ರ ಹಿಡಿದು ಸಕಲ ಜೀವರಾಶಿಗಳ ಒಳಿತಿಗೆ ಪಾದಯಾತ್ರೆ ಕೈಗೊಂಡು ಯಶಸ್ವಿಗೊಳಿಸಿದ್ದಾರೆ.
Kshetra Samachara
01/01/2022 09:13 pm