ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ವಿಮಾನ ನಿಲ್ದಾಣದ ಕಂಪೌಂಡ್ ಮೇಲೆ ಅರಳಿದ ಕಲೆ-ಸಂಸ್ಕೃತಿ

ವರದಿ: ರೇವನ್ ಪಿ.ಜೇವೂರ್, PublicNext

ಹುಬ್ಬಳ್ಳಿ: ವಿಮಾನ ನಿಲ್ದಾಣದ ಕಂಪೌಂಡ್ ಗೋಡೆಗಳ ಮೇಲೆ ಕಲೆ ಸಂಸ್ಕೃತಿ ಬಿಂಬಿಸೋ ವಿವಿಧ ಚಿತ್ರಗಳ ಚಿತ್ತಾರ. ಕರ್ನಾಟಕದ ವಿವಿಧ ಕಲೆ ಮತ್ತು ಸಂಸ್ಕೃತಿಯ ಚಿತ್ರಣ ಕಟ್ಟಿಕೊಡುವ ಈ ಚಿತ್ತಾರಗಳ ವಿಶೇಷತೆಯ ಸ್ಟೋರಿ ಇಲ್ಲಿದೆ. ಬನ್ನಿ ನೋಡೋಣ.

ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ಇರೋದೇ ವಿಶೇಷ. ಇಲ್ಲಿಯ ಜನಕ್ಕೂ ಈ ನಿಲ್ದಾಣದ ಬಗ್ಗೆ ಹೆಮ್ಮೆ ಇದೆ. ಇಂತಹ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಕಂಪೌಂಡ್ ಮೇಲೆ ಕಲೆ-ಸಂಸ್ಕೃತಿ ಸಾರುವ ಚಿತ್ರಗಳನ್ನ ಬಿಡಿಸಲಾಗಿದೆ. ವಿಮಾನ ನಿಲ್ದಾಣದಿಂದಲೇ ಈ ಅದ್ಭುತ ಕಾರ್ಯವಾಗಿದೆ.

ಯಕ್ಷಗಾನ-ಭರತ ನಾಟ್ಯ,ಹಳ್ಳಿ ಜೀವನ,ಬುಡಕಟ್ಟು ಮಹಿಳೆ,ಹೀಗೆ ಇಲ್ಲಿಯ ಚಿತ್ರಗಳು ಬದುಕಿನ ಜೀವನ ಶೈಲಿ ಕಟ್ಟಿಕೊಡುತ್ತವೆ. ಈ ಚಿತ್ರಗಳ ಮಧ್ಯದಲ್ಲಿ ವಿಮಾನ ನಿಲ್ದಾನದ ಲೋಗೋ ಕೂಡ ಇದೆ.

ಹುಬ್ಬಳ್ಳಿಯಿಂದ ವಿಮಾನ ನಿಲ್ದಾಣದ ಕಡೆಗೆ ಬರುವಾಗ ನೀವು ಒಮ್ಮೆ ಬಲಕ್ಕೆ ಕಣ್ಣು ಹಾಯಿಸಿದರೇ ಸಾಕು. ಅಲ್ಲಿಯ ಗೋಡೆಗಳ ಮೇಲೆ ಈ ಎಲ್ಲ ಚಿತ್ರಗಳು ನಿಮ್ಮನ್ನ ಆಕರ್ಷಿಸುತ್ತವೆ. ವಿಶೇಷ ಫೀಲ್ ಅನ್ನೂ ಕೊಡುತ್ತವೆ. ಒಮ್ಮೆ ಟ್ರೈ ಮಾಡಿ ನೋಡಿ.

Edited By : Nagesh Gaonkar
Kshetra Samachara

Kshetra Samachara

29/11/2021 07:09 pm

Cinque Terre

53.56 K

Cinque Terre

3

ಸಂಬಂಧಿತ ಸುದ್ದಿ