ಹುಬ್ಬಳ್ಳಿ: ನವೆಂಬರ್ 1 ಬಂದರೆ ಸಾಕು ನಾಡಿನಲ್ಲಿ ಸಡಗರ ಸಂಭ್ರಮ, ಇಡೀ ರಾಜ್ಯವೇ ಕೇಸರಿ ಹಳದಿ ಬಣ್ಣಗಳಿಂದ ಕಂಗೊಳಿಸುತ್ತಿತ್ತು, ಆದರೆ ಈ ಬಾರಿ ಕನ್ನಡ ರಾಜ್ಯೋತ್ಸವ ಹೆಸರಿಗೆ ಮಾತ್ರವಾಗಿದೆ. ಯಾವುದೇ ಸಂಭ್ರಮ ಇಲ್ಲ ಸಡಗರವಿಲ್ಲ. ಯಾಕೆ ಅಂತಿರಾ ಈ ಸ್ಟೋರಿ ನೋಡಿ...
ಕನ್ನಡದ ಕಣ್ಮಣಿ ಡಾ. ರಾಜಕುಮಾರ ಅವರ ಪ್ರೀತಿಯ ಮಗ, ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ವೀರ ಕನ್ನಡಿಗ, ಪವರ್ ಸ್ಟಾರ್ ಪುನೀತ್ ರಾಜಕುಮಾರ ನಮ್ಮನ್ನೆಲ್ಲ ಅಗಲಿದ್ದಾರೆ. ರಾಜ್ ಕುಟುಂಬಕ್ಕೂ ಹುಬ್ಬಳ್ಳಿಗೂ ಒಂದಿಲ್ಲೊಂದು ನಂಟು, ಉತ್ತರ ಕರ್ನಾಟಕ ಅಂದರೆ ಸಾಕು ಅವರಿಗೆ ಎಲ್ಲಿಲ್ಲದ ಪಂಚಪ್ರಾಣ, ತಂದೆ ಡಾ. ರಾಜಕುಮಾರ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡನ್ನು ಹುಬ್ಬಳ್ಳಿಯಲ್ಲಿಯೇ ಚಿತ್ರೀಕರಣ ಮಾಡಿದ್ದಾರೆ. ಚನ್ನಮ್ಮ ಸರ್ಕಲ್, ಶ್ರೀ ಸಿದ್ಧಾರೂಢರ ಮಠ, ಉನಕಲ್ ಕೆರೆ ಹೀಗೆ ಹಲವಾರು ಸ್ಥಳದಲ್ಲಿ ರಾಜ್ ಕುಟುಂಬದ ನೆನೆಪುಗಳಿವೆ. ಆದ್ದರಿಂದ ಹುಬ್ಬಳ್ಳಿ ಜನ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸಿಂಪಲ್ ಆಗಿ ಮಾಡಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ದೊಡ್ಡಮನೆ ಹುಡುಗನ ಅಗಲಿಕೆಯಿಂದ ಕರ್ನಾಟಕಕ್ಕೆ ತುಂಬಲಾರದಷ್ಟು ನಷ್ಟವಾಗಿದೆ, ಅಪ್ಪುನನ್ನು ಇಷ್ಟ ಪಡದೆ ಯಾರು ಇಲ್ಲ, ಚಿಕ್ಕ ಮಕ್ಕಳಿಂದ ಹಿರಿಯರು ಕೂಡ ಯುವರತ್ನನನ್ನು ಇಷ್ಟ ಪಡುತ್ತಿದ್ದರು. ಹುಬ್ಬಳ್ಳಿಯ ಜನ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರಿಗೆ ಅರ್ಪಣೆ ಮಾಡುತ್ತಿದ್ದಾರೆ. ಪಬ್ಲಿಕ್ ನೆಕ್ಸ್ಟ್ ವತಿಯಿಂದ ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು....
-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್,,,
Kshetra Samachara
01/11/2021 12:08 pm