ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕಲಾಕಸಕ್ತರ ಮನಸೂರೆಗೊಂಡ " ಅನಾಥರ ಮಾಯಿ '' ಯಶಸ್ವಿ ಪ್ರದರ್ಶನ

ಹುಬ್ಬಳ್ಳಿ : ಬುಧವಾರ ಸಂಜೆ ನಗರದ ಸವಾಯಿ ಗಂಧರ್ವ ಕಲಾಮಂದಿರ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದರೂ ಪಿನ್ ಡ್ರಾಪ್ ಸೈಲೆನ್ಸ್. ಅಬಾಲ ವೃದ್ಧರಾದಿಯಾಗಿ ನಾಟಕ ವೀಕ್ಷಿಸಲು ಕಾತುರರಾಗಿದ್ದರು. ನಗರ ಮಾತ್ರವಲ್ಲ ಧಾರವಾಡ, ಹಾಗೂ ಸುತ್ತಲಿನ ಗ್ರಾಮಗಳ ಕಲಾಸಕ್ತರನ್ನು ಸೆಳೆದ ನಾಟಕ " ಅನಾಥರ ಮಾಯಿ ''

ಕೊರೊನಾ ಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ಕಂಗೆಟ್ಟಿದ ಕಲಾ ಪ್ರೇಮಿಗಳಿಗೆ ಈ ನಾಟಕ ರಸದೌತಣ ನೀಡಿತು ಎಂದರೂ ಅತಿಶಯೋಕ್ತಿಯಾಗದು. ಖ್ಯಾತ ರಂಗಕರ್ಮಿ, ರಂಗಾಯಣದ ಮಾಜಿ ನಿರ್ದೇಶಕ ಸುಭಾಸ್ ನರೇಂದ್ರ ಸಾರಥ್ಯದ ಹುಬ್ಬಳ್ಳಿಯ ಸುನಿಧಿ ಕಲಾ ಸೌರಭ್ ಸಂಸ್ಥೆಯ " ಅನಾಥರ ಮಾಯಿ '' ಕಲಾಭಿವ್ಯಕ್ತಿಯ ಪ್ರತೀಕವಾಗಿ, ಮನೋಜ್ಞ ಅಭಿನಯ ಹಾಗೂ ಸಮರ್ಥ ನಿರ್ದೇಶನಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು.

ಅನಾಥರ ಮಾಯಿ '' , ಅನಾಥ ಮಕ್ಕಳನ್ನು ಸಾಕಿ ಸಲುಹಿದ ಮಹಾರಾಷ್ಟ್ರದ ಶ್ರೀಮತಿ ಸಿಂಧುತಾಯಿ ಸಕಪಾಳ್ ಅವರ ಜೀವನ ಆಧಾರಿತ ನಾಟಕ. ಸಿಂಧುತಾಯಿ ಪಾತ್ರ ವಹಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಹಾಗೂ ಖ್ಯಾತ ಅಭಿನೇತ್ರಿ ಶ್ರೀಮತಿ ವೀಣಾ ಅಠವಲೆ ಅವರ ಅಭಿನಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ಶ್ರೀಮತಿ ವೀಣಾ ಅಠವಲೆ ಅವರು ಸಿಂಧುತಾಯಿ ಪಾತ್ರದ ಮೂಲಕವೇ ಕಥಾ ವಸ್ತುವನ್ನು ಪ್ರೇಕ್ಷರ ಮುಂದಿಡುತ್ತ ಸಾಗುತ್ತಾರೆ. ಸಿಂಧುತಾಯಿಯ ಬಾಲ್ಯದಿಂದ ಪರಿತ್ಯಕ್ತ ಪತ್ನಿಯ ಸನ್ನಿವೇಶದವರೆಗೂ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದರು. ಆ ತಾಯಿ ಎದುರಿಸಿದ ಕಷ್ಟ ಕಾರ್ಪಣ್ಯ, ಅವಮಾನ, ಅನುಭವಿಸಿದ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಂತೆ ನಾಟಕ ಮುಂದುವರಿಯುತ್ತದೆ.

ಹೆಣ್ಣು ಅಬಲೆಯಲ್ಲ ಸಬಲೆ, ಮಹಿಳಾ ಸಬಲೀಕರಣ ಕೇವಲ ಮಾತಿನಲ್ಲಾಗಬಾರದು ಕೃತಿಯಲ್ಲಿ ಬರಬೇಕು. ಆಕೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು ಎಂಬ ಸಂದೇಶ ಸಾರುವುದು ನಾಟಕದ ತಿರುಳು. ಜಿಲ್ಲಾಧಿಕಾರಿ ಪಾತ್ರ ನಿರ್ವಹಣೆಯೊಂದಿಗೆ ನಾಟಕವನ್ನು ನಿರ್ದೇಶಿಸಿದ ಸುಭಾಸ್ ನರೇಂದ್ರ ಎಲ್ಲರ ಪ್ರಶಂಸೆಗೆ ಪಾತ್ರರದರು. ಮೊದಲ ಬಾರಿಯಾದರೂ, 20 ಕ್ಕೂ ಅವಳಿ ನಗರದ ಉದಯೋನ್ಮುಖ ಕಲಾವಿದರು ನುರಿತ ಪಾತ್ರಧಾರಿಗಳಿಗೆ ಸಮವಾಗಿ ಅಭಿನಿಯಿಸಿದ್ದು ವಿಶೇಷವಾಗಿತ್ತು.

Edited By : Nagesh Gaonkar
Kshetra Samachara

Kshetra Samachara

28/10/2021 07:50 pm

Cinque Terre

88.66 K

Cinque Terre

2

ಸಂಬಂಧಿತ ಸುದ್ದಿ