ನವಲಗುಂದ : ಮಹಾನವಮಿ ಹಬ್ಬದ ನಿಮಿತ್ತ ತಾಲ್ಲೂಕಿನ ಹಾಲಕುಸುಗಲ್ ಗ್ರಾಮದಲ್ಲಿ ಶಕ್ತಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಮದ ಭೀಮನಗೌಡ ಪಾಟೀಲ ಮತ್ತು ಅಲ್ತಾಫ್ ಪಡೆಸೂರ ಅವರಿಂದ ಸಾಷ್ಟಾಂಗ ನಮಸ್ಕಾರ ಮಾಡುವ ಮೂಲಕ ಅದ್ಭುತ ಶಕ್ತಿ ಪ್ರದರ್ಶನವನ್ನು ತೋರಲಾಯಿತು.
ಹೌದು ಮಹಾನವಮಿ ಹಬ್ಬಕ್ಕೆ ಗ್ರಾಮದಲ್ಲಿ ಜನರು ಅತ್ಯಂತ ಸಂಭ್ರಮದಿಂದ ಶಕ್ತಿ ಪ್ರದರ್ಶನ ನೋಡಿ, ಸಂತಸ ಪಟ್ಟರು. ಈ ಸಂಧರ್ಭದಲ್ಲಿ ಶಕ್ತಿ ಪ್ರದರ್ಶನದಲ್ಲಿ ಭಾಗಿಯಾದ ಭೀಮನಗೌಡ ಪಾಟೀಲ ಮತ್ತು ಅಲ್ತಾಫ್ ಪಡೆಸೂರ ಅವರು 50ಕೆಜಿ ಕೊಡ ಹಾಗೂ 1 ಕ್ವಿಂಟಾಲ್ ಚೀಲವನ್ನು ಗ್ರಾಮದ ಹೂಲಿ ಅಜ್ಜನ ಗುಡಿಯಿಂದ ಗ್ರಾಮದೇವತೆ ದ್ಯಾಮಮ್ಮ ದೇವಸ್ಥಾನದವರೆಗೆ ಸೌಹಾರ್ದದ ಸಾಷ್ಟಾಂಗ ನಮಸ್ಕಾರ ಮಾಡಿ, ಗ್ರಾಮಸ್ಥರಿಂದ ಸೈ ಎನಿಸಿಕೊಂಡರು.
Kshetra Samachara
16/10/2021 03:29 pm