ಧಾರವಾಡ: ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ಧಾರವಾಡದ ಪ್ರಸಿದ್ಧ ದುರ್ಗಾದೇವಿಯನ್ನು ಪ್ರತಿದಿನ ಒಂದೊಂದು ರೀತಿಯಲ್ಲಿ ವಿಶಿಷ್ಟವಾಗಿ ಅಲಂಕರಿಸಲಾಗುತ್ತಿದೆ. ಹೀಗೆ ಅಲಂಕಾರಗೊಂಡ ದುರ್ಗಾದೇವಿ ಎಲ್ಲರ ಕಣ್ಮನಸೆಳೆಯುತ್ತಿದ್ದಾಳೆ.
ಧಾರವಾಡದ ಮರಾಠಾ ಕಾಲೊನಿ ರಸ್ತೆಯ ಕಿಲ್ಲಾದಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ವಿಶಿಷ್ಟ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಇದರೊಂದಿಗೆ ದೇವಿಯ ಮೂರ್ತಿಯನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ದೇವಿಯನ್ನು ನಿಂಬೆಹಣ್ಣು, ಬಳೆ ಹಾಗೂ ಮುತ್ತಿನಿಂದ ಅಲಂಕರಿಸಲಾಗಿತ್ತು.
Kshetra Samachara
10/10/2021 05:57 pm