ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳದಲ್ಲೋಂದು ಜನಜಾಗೃತಿ ಸಭೆ ದುಶ್ಚಟಕ್ಕೆ ಹೇಳಿ ಗುಡ್ ಬೈ

ಕುಂದಗೋಳ : ನಮಗೆ ಜಮೀನು ಮನೆ ಆಸ್ತಿ ಇದ್ರೂ ಬ್ಯಾಂಕಲ್ಲಿ ಸಾಲ ಸಿಗಬೇಕಾದ್ರೇ ನೊರೊಂದು ಸರ್ಟಿಫಿಕೇಟ್ ಬೇಕು ಇಂತಹ ಕಾಲಘಟ್ಟದಲ್ಲಿ ಮಹಿಳಾ ಸಂಘ ಧರ್ಮಸ್ಥಳ ಮಂಜುನಾಥೇಶ್ವನ ಹೆಸರಲ್ಲಿ ಹುಟ್ಟು ಹಾಕಿ ಮಹಿಳೆಯರನ್ನು ಸ್ವಾವಲಂಬಿಯಾಗಿ ಮಾಡಿದ ಕೀರ್ತಿ ಡಾ.ವಿರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ಸಂಘದ ಅಧ್ಯಕ್ಷ ಶಿವಾನಂದ ಬೆಂತೂರು ಹೇಳಿದರು.

ಅವರು ಕುಂದಗೋಳ ಪಟ್ಟಣದ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ನಡೆದ 152ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ತಾಲೂಕು ಮಟ್ಟದ ಸಭೆ ಉದ್ದೇಶಿಸಿ ಮಾತನಾಡಿ ಹಳ್ಳಿಗಳು ಸಾರಾಯಿ ಮುಕ್ತವಾಗಲು ಮಹಿಳೆಯರು ಪಣ ತೊಡಿ ಎಂದರು.

ಅಭಿನವ ಕಲ್ಯಾಣಪುರ ಬಸವಣ್ಣನವರು ತಮ್ಮ ಆರ್ಶಿವಚನ ಭೋಧಿಸಿದರು, ಕುಂದಗೋಳ ಪಟ್ಟಣದ್ಯಾದ್ಯಂತ ಜನಜಾಗೃತಿ ಜಾಥಾ ಕೈಗೊಂಡು ಜನರಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸಿ ಮಹಾತ್ಮಾಗಾಂಧಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ, ಪೊಲೀಸ್ ನಿರೀಕ್ಷಕ ಮೌನೇಶ್ವರ ದೇಶನೂರ್, ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಸೇರಿ ವಿವಿಧ ಗಣ್ಯರು

ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

06/10/2021 08:17 pm

Cinque Terre

22.77 K

Cinque Terre

0

ಸಂಬಂಧಿತ ಸುದ್ದಿ