ಹುಬ್ಬಳ್ಳಿ: ವರ್ಷದಲ್ಲಿ ಹಲವಾರು ದಿನ ಆಚರಣೆಗಳನ್ನು ಆಚರಿಸುವಂತೆ ವಾಣಿಜ್ಯನಗರಿ ಹುಬ್ಬಳ್ಳಿಯ ಭೈರಿದೇವರಕೊಪ್ಪದ ಯುವಕರ ಪಡೆಯು ವನ್ಯಜೀವಿ ಸಂರಕ್ಷಣಾ ದಿನವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ಅಕ್ಟೋಬರ್ 05 ಪ್ರಾಣಿ ಸಂರಕ್ಷಣಾ ದಿನಕ್ಕೆ ಮೆರಗು ತಂದಿದ್ದಾರೆ.
ಹೌದು... ರಾಜ್ಯದ ವಿವಿಧ ಮೂಲೆಗಳಲ್ಲಿ ಹಾವುಗಳನ್ನು ಹಿಡಿದು ರಕ್ಷಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿರುವ ಭೈರಿದೇವರಕೊಪ್ಪದ ವನ್ಯಜೀವಿ ಸಂರಕ್ಷಣಾ ಸಂಘ ಈ ದಿನ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಇನ್ನೂ ಕಾರ್ಯಕ್ರಮಕ್ಕೆ ಪಾಲಿಕೆ ನೂತನ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ ಚಾಲನೆ ನೀಡಿದರು. ಇನ್ನೂ ಜನರಿಗೆ ಆತಂಕವನ್ನು ಉಂಟುಮಾಡಿರುವ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಬಹುತೇಕ ಉರಗ ಪ್ರೇಮಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
Kshetra Samachara
05/10/2021 10:42 pm