ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಾಸಿಕ ಶಿವಾನುಭವ ಕಾರ್ಯಕ್ರಮ ಮಹಿಳಾ ಸಬಲೀಕರಣಕ್ಕೆ ಎಲ್ಲರೂ ಬದ್ಧ

ಕುಂದಗೋಳ : ಪಟ್ಟಣದ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ಮಾಸಿಕ ಶಿವಾನುಭವ ಕಾರ್ಯಕ್ರಮವನ್ನು ಶಾರಾದಾಶ್ರಮದ ತೇಜೋಮಯಿ ಮಾತಾಜಿಯವರು ನಡೆಸಿ ನೆರೆದ ಸಭಿಕರಿಗೆ ಭಾರತೀಯ ಸಂಸ್ಕೃತಿ ಮಹಿಳಾ ಸಬಲೀಕರಣ ಮತ್ತು ತಾಯಿಂದರ ಕುರಿತು ಪ್ರವಚನ ನೀಡಿದರು.

ಕುಂದಗೋಳ ಪಟ್ಟಣದ ಅಕ್ಕನ ಬಳಗದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮಹಿಳೆಯರು ವಿವಿಧ ಗಣ್ಯರು ಭಾಗವಹಿಸಿ ಪ್ರವಚನ ಆಲಿಸಿದರು ಬಳಿಕ ಕಲ್ಯಾಣಪುರ ಬಸವಣ್ಣನವರ ನೇತೃತ್ವದಲ್ಲಿ ಶೈಕ್ಷಣಿಕ, ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಮತ್ತು ಯೋಗಪಟುಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ನಂತರದಲ್ಲಿ ನೆರೆದ ಸಭಿಕರು ಪ್ರಸಾಧದ ಸ್ವೀಕರಿಸಿ ಮಹಿಳೆಯರು ಗೌರವ ಮತ್ತು ಮಹಿಳೆಯರ ಸಬಲೀಕರಣಕ್ಕೆ ಬದ್ಧ ಎಂದು ಪ್ರಮಾಣ ಮಾಡಿದರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ, ಶ್ರೀಕಾಂತ್ ಕಲಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

04/10/2021 04:23 pm

Cinque Terre

19.67 K

Cinque Terre

0

ಸಂಬಂಧಿತ ಸುದ್ದಿ