ಗದಗ-ಬೆಟಗೇರಿ ಭಾರತದ ರಾಷ್ಟ್ರಪಿತ, ಅಹಿಂಸಾವಾದಿಯಾದ ಮಹಾತ್ಮಾ ಗಾಂಧಿ ಜಯಂತಿಯ ಹಾಗೂ ಲಾಲ್ ಬಹುದ್ದೂರ ಶಾಸ್ತ್ರೀ ಅವರ ಜಯಂತಿ ಅಂಗವಾಗಿ ಇಂದು ಬೆಟಗೇರಿಯ ಗಾಂಧಿ ಗುಡಿಯಲ್ಲಿ ವಿವಿಧ ಸಂಘಟನೆ ಹಾಗು ಸರಕಾರಿ ಇಲಾಖೆ ಸಿಬ್ಬಂದಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಸ್ವತಂತ್ರ ಹೋರಾಟದ ಸಮಯದಲ್ಲಿ ಗಾಂಧಿಜಿ ಅವರು ಈ ಜಾಗದಲ್ಲೇ ಬಂದು ನಿಂತು ಹೋರಾಟದ ಭಾಷಣ ಮಾಡಿದ ಉಲ್ಲೇಖವಿದೆ. ಈ ಜಾಗ ಈಗಲೂ ಗಾಂಧಿಗುಡಿ ಎಂದೇ ಪ್ರಸಿದ್ಧಿ ಹೊಂದಿದೆ
Kshetra Samachara
02/10/2021 07:13 pm