ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 700 ಕನ್ನಡ ನಾಟಕ ಗ್ರಂಥಾಲಯಕ್ಕೆ ಚಾಲನೆ: ಕನ್ನಡ ಸಾಹಿತ್ಯ ಪರಂಪರೆಯ ಉಳಿವಿಗೆ ಪ್ರಯತ್ನ...!

ಹುಬ್ಬಳ್ಳಿ: 700ಕ್ಕೂ ಅಧಿಕ ನಾಟಕ ಕೃತಿಗಳನ್ನು ಹೊಂದಿರುವ ಇಲ್ಲಿನ ಸುನಿಧಿ ಕಲಾ ಸೌರಭ ಸಂಸ್ಥೆಯ ವತಿಯಿಂದ ರಂಗ ನಾಟಕ ಗ್ರಂಥಾಲಯ ಉದ್ಘಾಟನೆಯನ್ನು ಇಂದುಸಂಜೆ ರಾಜಾಜಿ ನಗರದ ಚೈತನ್ಯ ಧಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು ಡಾ. ಸತೀಶಕುಮಾರ ಹೊಸಮನಿ ನೆರವೇರಿಸಿರು.

ಕೇವಲ ರಂಗ ನಾಟಕ ಕೃತಿಗಳನ್ನು ಹೊಂದಿರುವ ನೂರಾರು ನಾಟಕಕಾರರು ರಚಿಸಿದ 700ಕ್ಕೂ ಹೆಚ್ಚು ಕನ್ನಡ ನಾಟಕ ಕೃತಿಗಳನ್ನು ಹೊಂದಿದ ಗ್ರಂಥಾಲಯ ಇದಾಗಿದೆ.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಗಣಪತಿ ಗಂಗೊಳ್ಳಿ, ಧಾರವಾಡ ರಂಗಾಯಣ ಮಾಜಿ ನಿರ್ದೇಶಕರು ಸುಭಾಸ ನರೇಂದ್ರ, ಹುಬ್ಬಳ್ಳಿಯ ಈಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಲಕ್ಷ್ಮಣರಾವ ಓಕ್, ಸುನಿಧಿ ಕಲಾ ಸೌರಭದ ಕಾರ್ಯದರ್ಶಿಗಳು ವೀಣಾ ಅಠವಲೆ ಇದ್ದರು.

Edited By : Nagesh Gaonkar
Kshetra Samachara

Kshetra Samachara

30/09/2021 10:28 pm

Cinque Terre

69.51 K

Cinque Terre

0

ಸಂಬಂಧಿತ ಸುದ್ದಿ