ಧಾರವಾಡ- ಕರುನಾಡ ಹಣತೆ ಕವಿ ಬಳಗ ಧಾರವಾಡ ಘಟಕದ ಉದ್ಘಾಟನಾ ಸಮಾರಂಭವು ನಗರದ ರಂಗಾಯಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಸ್ಥಳೀಯ ಸಾಧಕರಿಗೆ ಪ್ರಶಸ್ತಿ ಸಮಾರಂಭ ಮಾಡಲಾಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ರಾಜೇಂದ್ರ ಕುಮಾರ ಮಠ ವಹಿಸಿಕೊಂಡಿದ್ದರು. ಡಾ ರಾಜೇಶ್ವರಿ ಮಹೇಶ್ವರಯ್ಯ ಅವರು ಉದ್ಘಾಟನೆ ಮಾಡಿದರು. ಚಂದ್ರಶೇಖರ ಮಾಡಲಗೇರಿ, ಪ್ರತಿಭಾ ಪಾಟೀಲ, ಜ್ಯೋತಿ ಶ್ರೀನಿವಾಸ, ಮೇಘಾ ಹುಕ್ಕೇರಿ ವಾಯ್.ಜೆ.ಮಹಿಬೂಬ ಹಾಗೂ ಸಂಪತ ಕುಮಾರ ಉಪಸ್ಥಿತರಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ ರುದ್ರೇಶ ಮೇಟಿ, ಮುಖ್ಯ ಅತಿಥಿಗಳಾಗಿ ಹಿಪ್ಪರಗಿ ಸಿದ್ದರಾಮ ವಹಿಸಿಕೊಂಡಿದ್ದರು.
Kshetra Samachara
19/09/2021 05:01 pm