ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು: ಸಿಂಹ ಸಂಕ್ರಮಣ ಭಜನಾ ಮಂಗಲೋತ್ಸವ

ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣದ ಕೊನೆಯದಿನವಾದ ಗುರುವಾರದಂದು ಭಜನಾ ಮಂಗಲೋತ್ಸವ, ಹೂವಿನ ಪೂಜೆ, ರಕ್ತೇಶ್ವರಿ ದೇವಿಗೆ ತಂಬಿಲ ಸೇವೆ, ಅನ್ನಸಂತರ್ಪಣೆ ನಡೆಯಿತು.

ಸಿಂಹ ಸಂಕ್ರಮಣದ ಪ್ರಯುಕ್ತ ಕಳೆದ ಒಂದು ತಿಂಗಳಿನಿಂದ ಶ್ರೀ ಆದಿ ಜನಾರ್ದನ ಮಹಿಳಾ ಭಜನಾ ಮಂಡಳಿ ವತಿಯಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯುತ್ತಿದ್ದು ಗುರುವಾರ ಮಂಗಲೋತ್ಸವ ನಡೆಯಿತು.

ಈ ಸಂದರ್ಭ ಶಿಮಂತೂರು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಶಶಿಕಲಾ ಎನ್, ಶಿಮಂತೂರು ಯುವಕ ಮಂಡಲದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು

Edited By :
Kshetra Samachara

Kshetra Samachara

16/09/2021 10:54 pm

Cinque Terre

23.92 K

Cinque Terre

0

ಸಂಬಂಧಿತ ಸುದ್ದಿ