ಕಲಘಟಗಿ: ತಾಲೂಕಿನ ದೇವಿ ದೇವಿಕೊಪ್ಪ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ದೇಶಭಕ್ತಿ ನಾಟಕ ಪ್ರದರ್ಶನವನ್ನು ಮಂಗಳವಾರ ಮಾಡಿ ಗಮನ ಸೆಳೆದರು.
ನಾಟಕದಲ್ಲಿ ಪಾತ್ರವಹಿಸಿದ ಮಕ್ಕಳಾದ ಮಾನ್ಯಶ್ರೀ ಕರೆಪೂಜಾರಿ ಚೆನ್ನಮ್ಮನ ಪಾತ್ರದಲ್ಲಿ,ಹರೀಶ ಹಿತ್ತಲಮನಿ ರಾಯಣ್ಣನ ಪಾತ್ರದಲ್ಲಿ,ಅನುಷ ದೂಳಿಕೊಪ್ಪ ಠಾಕ್ರೆ ಪಾತ್ರದಲ್ಲಿ ಭಾಗವಹಿಸಿ ನಾಟಕ ಪ್ರದರ್ಶನ ಮಾಡಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಸಾಧನೆಗಳನ್ನು ಸ್ಮರಿಸಿದರು.
Kshetra Samachara
18/08/2021 11:59 am